ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ ಸಾಬೀತು, ಕುಂದಾಪುರದ ಎಂಜಿನಿಯರ್ 7 ವರ್ಷ ಜೈಲು!

Views: 219
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಂದಾಪುರದ ಬೆಟಕೇರಿ ನಿವಾಸಿ ರಾಕೇಶ್ ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಕುಮಟಾದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಕೇಶ್ ತನ್ನ ನೆರೆಯ ಬಿಇಡಿ ಓದುತ್ತಿದ್ದ ಯುವತಿಯ ಜೊತೆ ಪ್ರೇಮ ಸಂಬಂಧ ಹೊಂದಿದ್ದು ಆ ಬಳಿಕ ಬಂಟ್ವಾಳ ಮತ್ತು ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದ 2015 ರಲ್ಲಿ ಕುಂದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಯುವತಿಯನ್ನು ಕುಂದಾಪುರಕ್ಕೆ ಕರೆಸಿಕೊಂಡಿದ್ದ ರಾಕೇಶ್ ಯುವತಿಯ ಒಪ್ಪಿಗೆ ಪಡೆಯದೆ ದೈಹಿಕ ಸಂಪರ್ಕ ಬೆಳೆಸಿದ್ದ ರಾಕೇಶ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಕುಂದಾಪುರ ನ್ಯಾಯಾಲಯ ರಾಕೇಶ್ ನನ್ನು ದೋಷ ಮುಕ್ತಗೊಳಿಸಿದ್ದು, ಆದರೆ ಇದನ್ನು ಪ್ರಶ್ನಿಸಿ ಯುವತಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಭಾಕರ್ ಶಾಸ್ತ್ರಿ ಉಮೇಶ್ ಅಡಿಗ ಅವರನ್ನು ಒಳಗೊಂಡಿದ್ದ ದ್ವಿ ಸದಸ್ಯ ನ್ಯಾಯ ಪೀಠ ರಾಕೇಶ್ ದೋಷಿ ಎಂದು ತೀರ್ಪು ನೀಡಿದೆ.
ರಾಕೇಶ್ ಗೆ ಏಳು ವರ್ಷಗಳ ಸಜೆ ಐವತ್ತು ಸಾವಿರ ರೂಪಾಯಿ ದಂಡ, ವಿಫಲವಾದರೆ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಮೋಸ ಸಾಬೀತಾದ ಹಿನ್ನೆಲೆಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ನೀಡಲಾಗಿದ್ದು ಶಿಕ್ಷೆಯನ್ನು ಏಕಕಾಲದಲ್ಲಿ ಅನ್ವಯಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ದಂಡದಲ್ಲಿ 45,000 ಸಂತ್ರಸ್ತೆಗೆ, ಮತ್ತು 5,000 ರೂಗಳನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತಗೆ ಪಾವತಿಸಬೇಕಾದ ಪರಿಹಾರ ಮೊತ್ತದ ಬಗ್ಗೆ ಆರು ತಿಂಗಳ ಒಳಗೆ ತೀರ್ಮಾನ ಕೈಗೊಳ್ಳಬೇಕು.
ರಾಕೇಶ್ 45 ದಿನದೊಳಗೆ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿ ಕುಂದಾಪುರದ ವಕೀಲ ರವಿಕಿರಣ ಮುರುಡೇಶ್ವರ ವಿಶೇಷ ಪಬ್ಲಿಕ್ ಪ್ರಾಜಿಕ್ಯೂಟರ್ ಮತ್ತು ಸಂತ್ರಸ್ತೆ ಯುವತಿ ಪರ ಹರೀಶ್ ಟಿ ಭಂಡಾರಿ ವಾದಿಸಿದ್ದರು