ಇತರೆ

ಮದುವೆಯಾಗಿ ಆರೇ ತಿಂಗಳಲ್ಲಿ ಪತ್ನಿಯನ್ನು ಕೊಂದು, ಅಪಘಾತದಲ್ಲಿ ಮೃತಪಟ್ಟಿದ್ದಾಳೆಂದು ಕತೆ ಕಟ್ಟಿ ಆತ್ಪತ್ರೆ ಸೇರಿದ ಪತಿರಾಯ!

Views: 65

ದಾವಣಗೆರೆ: ಕೇವಲ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಜೋಡಿ ಗಂಡ-ಹೆಂಡತಿ ಮಧ್ಯೆ ಮನಸ್ತಾಪದಿಂದ ಜಗಳವಾಡಿ , ತವರು ಮನೆಯಿಂದ ಬರುವಾಗ ಪತ್ನಿಯನ್ನೇ ಕೊಂದು, ಅಪಘಾತದಲ್ಲಿ ಮೃತಪಟ್ಟಿದ್ದಾಳೆಂದು ಕರೆ ಮಾಡಿದ ಪತಿ ಇದೀಗ ಜೈಲು ಸೇರಿದ ಘಟನೆ ಚೆನ್ನಗಿರಿ ತಾಲೂಕಿನ ನುಗ್ಗಿಹಳ್ಳಿಯಲ್ಲಿ ನಡೆದಿದೆ.

ಪತಿ ತಿಪ್ಪೇಶ ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಮೃತ ಪತ್ನಿಯ ಮನೆಯವರಿಗೆ ಪೋನ್ ಮಾಡಿದ್ದರು.

ಮೃತ ಶರೀರವನ್ನು ಆಸ್ಪತ್ರೆಯಲ್ಲಿ ನೋಡಿದ ಮೃತ ಯಶೋಧಳ ತಂದೆ ಇದು‌ ಅಪಘಾತವಲ್ಲ ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಿ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಮೃತ‌ ಮಹಿಳೆಯ ಪತಿ ತಿಪ್ಪೇಶನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಿಸಿದಾಗ ಕೊಲೆಯ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವೃತ್ತ ನಿರೀಕ್ಷಕ ನಿರಂಜನ್ ತಿಳಿಸಿದ್ದಾರೆ.

Related Articles

Back to top button