ರಾಜಕೀಯ

ಮತದಾನ ದಿನ ಕಾಮಿ೯ಕರಿಗೆ ವೇತನ ಸಹಿತ ರಜೆ

Views: 1

ಕುಂದಾಪುರ :ಮತದಾನ ನಡೆಯುವ ಉಡುಪಿ ಜಿಲ್ಲಾದ್ಯಂತ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಲ್ಲಾ ಕಾಖಾ೯ನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಕರು ಕಾಮಿ೯ಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಿ, ಮತ ಚಲಾಯಿಸಲು ಅನುವುಮಾಡಿಕೊಡಬೇಕು ಎಂದು ಕಾಮಿ೯ಕ ಇಲಾಖೆ ಪ್ರಕಟನೆ ತಿಳಿಸಿದೆ.

ಅಂಚೆ ಮತದಾನ : ಅಗತ್ಯ ಸೇವೆಗಳಡಿ ಗುರುತಿಸಲಾದ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೇಂದ್ರ ಚುನಾವಣಾ ಆಯೋಗವು ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿದೆ.

ಪೋಸ್ಟಲ್ ವೋಟಿಂಗ್ ಸೆಂಟರ್ ಅನ್ನು ಜಿಲ್ಲೆಯಲ್ಲಿ ವಿಶೇಷವಾಗಿ ಮೇ 2 ರಿಂದ ಮೇ 4 ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಕಾಯ೯ನಿವ೯ಹಿಸಲಿದೆ.

ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ, ಸಿಬ್ಬಂದಿ ನಿಗದಿಪಡಿಸಿದ ದಿನಾಂದಂದು ಮತದಾನ ಮಾಡಬೇಕು, ವೇತನ ಸಹಿತ ರಜೆ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮನೆಯಲ್ಲಿಯೇ ಮತದಾನ :  80 ವಷ೯ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಾಂಗ ಚೇತನರು ಮನೆಯಲ್ಲಿಯೇ ಮತಚಲಾಯಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದೆ. ಮೇ 6 ವರೆಗೂ ಈ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Related Articles

Back to top button