ಕರಾವಳಿ

ಮಂಗಳೂರು:ರಾಷ್ಟ ಧ್ವಜಕ್ಕೆ ಅಪಮಾನ, ಶ್ರೀನಿವಾಸ್ ಕಾಲೇಜು ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ಆಗ್ರಹ

Views: 161

ರಾಷ್ಟ್ರ ಧ್ವಜಕ್ಕೆ ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಅಪಮಾನ ಮಾಡಲಾಗಿದೆ. ಆ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ಒತ್ತಾಯಿಸಿದೆ.

ಕಾಲೇಜಿನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆ ನೀಡಿದ್ದಾರೆ.

ಜ.22ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಉದ್ಘಾಟನಾ ಸಮಾರಂಭದ ಸಂಧರ್ಭಯಲ್ಲಿ ಕಾಲೇಜಿನಲ್ಲಿ ದೇಶದ ರಾಷ್ಟ್ರ ಧ್ವಜ ಹಾರಿಸಲು ಮೀಸಲಿಟ್ಟ ರಾಷ್ಟ್ರ ಲಾಂಛನವಿರುವ ಧ್ವಜಸ್ತಂಭದಲ್ಲಿ ಒಂದು ಮತಕ್ಕೆ ಸೀಮಿತವಾದ ಕೇಸರಿ ಬಾವುಟ ಹಾರಿಸಲಾಗಿದೆ. ಇದು ರಾಷ್ಟ್ರಧ್ವಜ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಡಿವೈಎಫ್‌ಐ ಕಿಡಿಕಾರಿದ್ದಾರೆ.

ರಾಷ್ಟ್ರ ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಆದರೆ, ರಾಷ್ಟ್ರ ಲಾಂಛನವಿರುವ ಧ್ವಜ ಸ್ಥಂಭದಲ್ಲಿ ಕೇಸರಿ ಬಾವುಟ ಹಾರಿಸಿರುವುದು ದೇಶ ವಿರೋಧಿ ಕೃತ್ಯವಾಗಿರುತ್ತದೆ ಎಂದು ಸಂಘಟನೆ ಹೇಳಿದೆ.

ರಾಷ್ಟ್ರ ಧ್ವಜ ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿ ದೇಶ ವಿರೋಧಿ ಕೃತ್ಯ ಎಸಗಲು ಕಿಡಿಗೇಡಿಗಳಿಗೆ ಪ್ರೇರಣೆ ನೀಡಿದ ಶ್ರೀನಿವಾಸ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪೊಲೀಸ್ ಇಲಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಹಬಾಳ್ವೆ ಕುರಿತು ಜಾಗೃತಿ ಮೂಡಿಸಬೇಕಿದ್ದ ಕಾಲೇಜಿನಲ್ಲಿ ಧರ್ಮಾಂಧತೆ, ಮತೀಯತೆಗೆ ಬೆಂಬಲ ಕೊಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Related Articles

Back to top button