ಇತರೆ
ಭೀಕರ ಅಪಘಾತ: ಕಾರು-ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರರು ಸಾವು

Views: 247
ಕನ್ನಡ ಕರಾವಳಿ ಸುದ್ದಿ : ದೇವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೇವನಹಳ್ಳಿ ಹಾಗೂ ಅರದೇಶನಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿದೆ.ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದೆ.ಡಿಕ್ಕಿ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ಉಗನವಾಡಿಯ ವೆಂಕಟೇಶ್ (50), ಹಾಗೂ ಕಸವನಹಳ್ಳಿಯ ಮಹೇಶ್ (30) ಮೃತಪಟ್ಟಿದ್ದಾರೆ
ಅಪಘಾತದಲ್ಲಿ ಮೃತ ಪಟ್ಟ ದೇಹಗಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ.ಆಸ್ಪತ್ರೆಯ ಬಳಿ ಜಮಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ವಿಶ್ವನಾಥಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.