ಸಾಂಸ್ಕೃತಿಕ

ಬ್ರೇಕಿಂಗ್ ನ್ಯೂಸ್… ಸಾನಿಯಾ ಮಿರ್ಜಾ ಮೊಹಮ್ಮದ್ ಶಮಿ ಅವರೊಂದಿಗೆ ವಿವಾಹ..!?  

Views: 238

ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಮಾಜಿ ಪತಿ ಶೋಯಾಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಬರೋಬ್ಬರಿ 14 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಅವರ ಪತಿ ಪಾಕಿಸ್ತಾನಿ ಕ್ರಿಕೆಟಿಗ ಶೋಯಾಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

ಇನ್ನು, ಸಾನಿಯಾ ಮಿರ್ಜಾ ಅವರ ವಿಚ್ಛೇದನ ವಿಷಯ ರಾಷ್ಟ್ರೀಯ ಸುದ್ದಿಯಾದ ಬೆನ್ನಲ್ಲೇ ಮತ್ತೊಂದು ಸುದ್ದಿ ಸಕತ್ ವೈರಲ್ ಆಗುತ್ತಿದೆ. ಅದು, ಸಾನಿಯಾ ಮಿರ್ಜಾ ಅವರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಿದ್ದಾರೆ ಎಂಬುದು. ಹೌದು.. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಫೋಟೋ ಎಂದು ಪೋಟೋವೊಂದು ವೈರಲ್ ಆಗಿದ್ದು, ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಈ ಫೋಟೋ ವೈರಲ್ ಆಗಿತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತು. “ಬ್ರೇಕಿಂಗ್ ನ್ಯೂಸ್… ಸಾನಿಯಾ ಮಿರ್ಜಾ ಮೊಹಮ್ಮದ್ ಶಮಿ ಅವರೊಂದಿಗಿನ ವಿವಾಹ ಘೋಷಿಸಿದ್ದಾರೆ. ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್‌ಗೆ ಮುನ್ನ ಮದುವೆಯಾಗಲಿದ್ದಾರೆ. ಮೊಹಮದ್ ಶಮಿ ಅವರ ಕೂದಲು ಕಸಿ ಮಾಡಿಸಿದ ನಂತರ ಲಿಯೊನಾರ್ಡೊ ಡಿಕಾಪ್ರಿಯೊ ಅವರಂತೆ ಕಾಣುತ್ತಾರೆ ಎಂದು ಸಾನಿಯಾ ಹೇಳಿದ್ದಾರೆ” ಒಬ್ಬ ಬಳಕೆದಾರರು ಟ್ವಿಟ್ ಮಾಡಿದ್ದಾರೆ.

ಕೆಲವರು ತಾವು ಈಗಾಗಲೇ ಈ ಜೋಡಿ ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಇಬ್ಬರು ತಮ್ಮ ಹಿಂದಿನ ಸಂಬಂಧದಲ್ಲಿ ಸಂತೋಷವಾಗಿರಲಿಲ್ಲ. ಹೀಗಾಗಿ ಇದು ಉತ್ತಮ ಜೋಡಿಯಾಗಲಿದೆ ಎಂದು ಹಲವು ಫ್ಯಾನ್ಸ್ ಆಶಿಸಿದ್ದಾರೆ.

“ಸಾನಿಯಾ ಮಿರ್ಜಾ ಬಯಸಿದರೆ, ಅವರು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ಎರಡನೇ ಬಾರಿಗೆ ಮದುವೆಯಾಗುವ ಮೂಲಕ ಶೋಯೆಬ್ ಮಲಿಕ್‌ಗೆ ತಕ್ಕ ಪ್ರತ್ಯುತ್ತರ ನೀಡಬಹುದು. ಇದರ ಬಗ್ಗೆ ನೀವು ಏನು ಹೇಳುತ್ತೀರಿ? ಕಾಮೆಂಟ್ ಮಾಡುವ ಮೂಲಕ ಹೇಳಿ” ಎಂದು ಒಬ್ಬ ಬಳಕೆದಾರರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

“ಸಾನಿಯಾ ಮಿರ್ಜಾ ಟೆನಿಸ್ ಆಟಗಾರ್ತಿ ನಮ್ಮದೇ ಭಾರತೀಯ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿಯೊಂದಿಗೆ ಖಂಡಿತವಾಗಿಯೂ ಮದುವೆಯಾಗಬೇಕು ಎಂದು ನಾನು ಆಶಿಸುತ್ತೇನೆ. ಆಕೆಗೆ ಮೊಹಮ್ಮದ್ ಶಮಿಗಿಂತ ಉತ್ತಮ ಜೀವನ ಸಂಗಾತಿ ಸಿಗುವುದಿಲ್ಲ. ಮೊಹಮ್ಮದ್ ಶಮಿ ತುಂಬಾ ಉದಾತ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಮತ್ತು ಪರಿಶುದ್ಧ ಹೃದಯವನ್ನು ಹೊಂದಿದ್ದಾರೆ. ನಾವೆಲ್ಲರೂ ಭಾರತೀಯರು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ” ಎಂದು ಹೇಳಿದ್ದಾರೆ.

ಆದರೆ, ಸಾನಿಯಾ ಮಿರ್ಜಾ ಆಗಲಿ, ಮೊಹಮ್ಮದ್ ಶಮಿಯಾಗಲಿ ಇವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ವೈರಲ್ ಫೋಟೋಗೆ ಸಂಬಂಧಿಸಿದಂತೆ, ಈ ಚಿತ್ರವನ್ನು ದುಷ್ಕರ್ಮಿಗಳು ತಪ್ಪು ಮಾಹಿತಿ ಹರಡಲು ಫೇಕ್ ಮಾಡಿದ್ದಾರೆ. ನಿಜ ಹೇಳಬೇಕೆಂದರೆ, ಇದು ಶೋಯಾಬ್ ಮಲಿಕ್ ಅವರೊಂದಿಗಿನ ಮದುವೆಯ ಫೋಟೋ. ಮತ್ತೊಂದು ಫೋಟೋ ಹಸಿನ್ ಜಹಾನ್ ಜೊತೆಗಿನ ಮಹಮದ್ ಶಮಿ ಅವರ ಮೊದಲ ಮದುವೆಯ ಫೋಟೋ.

ಎರಡು ಫೋಟೋಗಳನ್ನು ಕೋಲಾಜ್ ಮಾಡಿ ಇಬ್ಬರು ಮದುವೆಯಾಗುತ್ತಾರೆ, ಇಬ್ಬರು ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಸಾನಿಯಾ ಮಿರ್ಜಾ ತಮ್ಮ ಮಾಜಿ ಪತಿ ಶೋಯಾಬ್ ಮಲಿಕ್ ಮದುವೆ ಬಳಿಕತಾವು ಬೇರೆಯಾಗಿ ಈಗಾಗಲೇ ಕೆಲವು ತಿಂಗಳುಗಳು ಕಳೆದಿವೆ ಎಂದು ಸ್ಪಷ್ಟನೆ ನೀಡಿದ್ದರು.

Related Articles

Back to top button