ಕರಾವಳಿ

ಬ್ರಹ್ಮಾವರ: ನದಿಯಲ್ಲಿ ಮುಳುಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಆಪತ್ಭಾಂಧವ ಈಶ್ವರ್ ಮಲ್ಪೆ 

Views: 94

ಬ್ರಹ್ಮಾವರ: ಹೇರೂರು ಮಡಿಸಾಲು ಹೊಳೆಯಲ್ಲಿ ವ್ಯಕ್ತಿಯೊಬ್ಬರು ಈಜುವಾಗ ಕಳೆದುಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಮುಳುಗುತಜ್ಞ ಈಶ್ವರ್ ಮಲ್ಪೆ ಹುಡುಕಿಕೊಟ್ಟ ಈಶ್ವರ ಮಲ್ಪೆಗೆ ಮೆಚ್ಚುಗೆ ವ್ಯಕ್ತವಾಯಿತು.

ರವಿವಾರ ಮಧ್ಯಾಹ್ನ ತೂಗು ಸೇತುವೆ ಬಳಿ ನಾಲ್ವರು ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭ ಒಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳೆದುಹೋಯಿತು. ತತ್‌ಕ್ಷಣ ಆಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿ ವಿನಂತಿಸಿದ ಮೇರೆಗೆ ಅವರು ಕಾರ್ಯಾಚರಣೆ ನಡೆಸಿ ಸರ ಹುಡುಕಿ ಮರಳಿಸಿದರು.ಈ ಹಿಂದೆ ಕೂಡ ಈಶ್ವರ್ ಮಲ್ಪೆ ನೀರಿಗೆ ಬಿದ್ದಿದ್ದ ಚಿನ್ನಾಭರಣವನ್ನು ನಾನಾ ಕಡೆ ಹುಡುಕಿಕೊಟ್ಟಿದ್ದರು.ಈಶ್ವರ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.ಸರ ಮರಳಿ ಪಡೆದವರು ಕೃತಜ್ಞತೆ ಸಲ್ಲಿಸಿದರು.

Related Articles

Back to top button