ಜನಮನ

ಬೇಟೆಗಾರರು ಕಾಡುಹಂದಿಗೆ ಇರಿಸಿದ ಉರುಳಿಗೆ ಸಿಲುಕಿ ಚಿರತೆ ಸಾವು

Views: 178

ಕನ್ನಡ ಕರಾವಳಿ ಸುದ್ದಿ: ಬೇಟೆಗಾರರು ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಶುಕ್ರವಾರ ನಡೆದಿದೆ.

ಬೇಟೆಗಾರರು ಕಾಡುಹಂದಿ ಬೇಟೆಗೆ ಉರುಳಿ ಇರಿಸಿದ್ದು, ಅದರಲ್ಲಿ ಚಿರತೆ ಸಿಲುಕಿದ್ದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಚಿರತೆಗೆ ಅಗತ್ಯವಾದ ರಕ್ಷಣೆಗೆ ತುಂಬಾ ಶ್ರಮಿಸಿದ್ದರು. ಚಿರತೆಗೆ ಅರಿವಳಿಕೆ ನೀಡಿ ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡುವ ಯೋಜನೆ ರೂಪಿಸಿದ್ದರು. ಅದಕ್ಕಾಗಿ, ಶಿವಮೊಗ್ಗದಿಂದ ಅರಿವಳಿಕೆ ತಜ್ಞರನ್ನು ಕರೆಸಿದ್ದರು. ಆದರೆ ಯಾವುದೆ ಪ್ರಯೋಜನವಾಗದೆ ಉರುಳಿ ಬಿಗಿಗೊಂಡು ಚಿರತೆ ನರಳಿ ಪ್ರಾಣಬಿಟ್ಟಿದೆ.

ಅರಣ್ಯಾಧಿಕಾರಿಗಳು ಪರಾರಿಯಾದ ಬೇಟೆಗಾರರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲದೇ, ಅಕ್ರಮ ಬೇಟೆ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

Related Articles

Back to top button