ಜನಮನ

ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಕಡು ಬಿಸಿಲು:ಹವಾಮಾನ ಇಲಾಖೆ ಮುನ್ಸೂಚನೆ

Views: 15

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಕಾಲಿಡುತ್ತಿದ್ದ ಬೇಸಿಗೆಯ ಬೇಗೆ, ಈ ಬಾರಿ ಅವಧಿಗಿಂತ ಮುನ್ನವೇ ಕಾಣಿಸಿಕೊಳ್ಳುತ್ತಿದೆ. ಫೆಬ್ರವರಿ ಮೂರನೇ ವಾರದಿಂದಲೇ ಕಡು ಬಿಸಿಲು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಸ್ತುತ ಕನಿಷ್ಠ ತಾಪಮಾನವು ವಾಡಿಕೆಯಂತೆಯೇ ಮುಂದುವರಿದಿದ್ದರೂ, ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಈಗಾಗಲೇ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದೆ. ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ.

ಬೆಂಗಳೂರು ಮತ್ತು ಕೋಲಾರದಂತಹ ಜಿಲ್ಲೆಗಳಲ್ಲಿ ತಾಪಮಾನವು ಸದ್ಯಕ್ಕೆ ಹಿತಕರವಾಗಿದ್ದರೂ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಪ್ರಮುಖ ನಗರಗಳ ಗರಿಷ್ಠ ಹಾಗೂ ಕನಿಷ್ಠ ಹವಾಮಾನ

ಬೆಂಗಳೂರು: 30-16

ಮಂಗಳೂರು: 32-22

ಉಡುಪಿ: 32-21

ಕಾರವಾರ: 31-23

ಚಿಕ್ಕಮಗಳೂರು: 28-16

ದಾವಣಗೆರೆ: 32-18

ಹುಬ್ಬಳ್ಳಿ: 31-18

ಚಿತ್ರದುರ್ಗ: 31-18

ಹಾವೇರಿ: 32-18

ಬಳ್ಳಾರಿ: 32-18

ಗದಗ: 31-18

ಕೊಪ್ಪಳ: 31-18

ರಾಯಚೂರು: 32-19

ಯಾದಗಿರಿ: 32-18

ವಿಜಯಪುರ: 31-18

ಬೀದರ್: 31-18

ಕಲಬುರಗಿ: 32-18

ಬಾಗಲಕೋಟೆ: 32-18

ಮೈಸೂರು: 31-18

ಮಂಡ್ಯ: 32-18

ಮಡಿಕೇರಿ: 29-16

ರಾಮನಗರ: 32-17

ಹಾಸನ: 29-16

ಚಾಮರಾಜನಗರ: 30-17

ಚಿಕ್ಕಬಳ್ಳಾಪುರ: 30-16

ಶಿವಮೊಗ್ಗ: 32-18

ಬೆಳಗಾವಿ: 31-17

ಕೋಲಾರ: 29-15

ತುಮಕೂರು: 31-16

Related Articles

Back to top button
error: Content is protected !!