ಇತರೆ
ಬೆಂಕಿ ವದಂತಿಗೆ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಹಳಿಗೆ ಬಿದ್ದು12 ಪ್ರಯಾಣಿಕರು ಸಾವು

Views: 84
ಕನ್ನಡ ಕರಾವಳಿ ಸುದ್ದಿ: ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಪುಷ್ಪಕ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿಗೆ ಆತಂಕಗೊಂಡ 12 ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಂಪ್ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ.
ಸಂಜೆ 5 ಗಂಟೆಗೆ ಪುಷ್ಪಕ್ ಎಕ್ಸ್‌ಪ್ರೆಸ್, ಉತ್ತರ ಪ್ರದೇಶದ ಲಕ್ನೋದಿಂದ ಮುಂಬೈಗೆ ಬಂದು ಸೇರಬೇಕಿತ್ತು. ಮಹಾರಾಷ್ಟ್ರ ಜಲಗಾಂವ್ಗೆ ತಲುಪುತ್ತಿದ್ದಂತೆ ರೈಲಿನಿಂದ ಬಿಸಿ ಗಾಳಿ ಬಂದಿದೆ. ಈ ಬಿಸಿಗಾಳಿಯನ್ನೇ ಪ್ರಯಾಣಿಕರು ಬೆಂಕಿ ಎಂದು ಭಾವಿಸಿ ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದವರು ಪ್ರಾಣ ಕಳೆದುಕೊಂಡಿದ್ದಾರೆ.
ಟ್ರ್ಯಾಕ್ನ ಮೇಲೆ ಇದ್ದರ ಮೇಲೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದಿದೆ. ಈ ಅವಘಡದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 12ಕ್ಕೆ ಏರಿಕೆ ಆಗಿದ್ದು, ಹಲವು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.