ಬೀಜಾಡಿ ಸೀತಾಲಕ್ಷ್ಮೀ ಮತ್ತು ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆಗೆ ಕಂಪ್ಯೂಟರ್ ಕೊಡುಗೆ

Views: 59
ಕುಂದಾಪುರ : ಸೀತಾಲಕ್ಷ್ಮೀ ಮತ್ತು ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆ ಬೀಜಾಡಿ ಇಲ್ಲಿಗೆ ರೋಬೋ ಸ್ವಾಪ್ಟವೇರ್ ಸಂತೆಕಟ್ಟೆ ಇವರು ಇತ್ತೀಚಿಗೆ 2 ಕಂಪ್ಯೂಟರ್ ದೇಣಿಗೆಯಾಗಿ ನೀಡಿರುತ್ತಾರೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಹಿತರಕ್ಷಣಾ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಶೇಷಗಿರಿ ಗೋಟ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಿತರಕ್ಷಣ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ರಾವ್ ಇವರು ಉಪಸ್ಥಿತರಿದ್ದರು. ರೋಬೋ ಸ್ವಾಪ್ಟ್ ವೇರ್ ಸಂಸ್ಥೆಯಿಂದ ಸ್ವಪ್ನರವರು ಈ ಕೊಡುಗೆಯನ್ನು ಹಸ್ತಾಂತರಿಸಿದರು. ಕೊಡುಗೆಯನ್ನು ಈ ಶಾಲೆಗೆ ಕೊಡಿಸುವಲ್ಲಿ ಸಹಕರಿಸಿದ ಚೇಂಪಿಯ ಸಮಾಜ ಸೇವಕಿ ತಿಲೋತ್ತಮ ಮೆಡಂ ನ್ನು ಸ್ಮರಿಸಿ ಕೊಳ್ಳಲಾಯಿತು. ವೇದಿಕೆಯಲ್ಲಿದ್ದ ಗಣ್ಯರನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮೋಗವೀರ ಹಾಗೂ ಆಂಗ್ಲ ಭಾಷಾ ಶಿಕ್ಷಕಿ ಶ್ರೀಮತಿ ಪ್ರೇಮಾರವರು ಶಾಲು ಹೋದಿಸಿ ಗೌರವಿಸಿದರು.ಮುಖ್ಯ ಶಿಕ್ಷಕರಾದ ಶ್ರೀಮತಿ ವಿನೋದಾ ಎಂ. ರವರು ಸ್ವಾಗತಿಸಿ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀ ನಟರಾಜ್ ಧನ್ಯವಾದ ನೀಡಿದರು. ಡಾ. ಸದಾನಂದ ಬೈಂದೂರ್ ಕಾರ್ಯಕ್ರಮ ನಿರೂಪಿಸಿದರು.