ರಾಜಕೀಯ

ಬಿಜೆಪಿ 28ರ ಪೈಕಿ 22 ಲೋಕಸಭಾ ಕ್ಷೇತ್ರಗಳು ಫೈನಲ್​​.. ಉಡುಪಿಗೆ ಶೋಭಾಗೆ ಟಿಕೆಟ್ ಪಕ್ಕಾ.. ಮೈಸೂರು ಪ್ರತಾಪ್ ಸಿಂಹಗೆ..ಶಾಕ್..!

Views: 138

ಕರುನಾಡಿನ ಟಿಕೆಟ್ ಚಕ್ರವ್ಯೂಹವನ್ನ ಬೇಧಿಸುವಲ್ಲಿ ಕೊನೆಗೂ ಬಿಜೆಪಿ ಹೈಕಮಾಂಡ್ ಸಕ್ಸಸ್ ಆಗಿದೆ. ದೆಹಲಿಯಲ್ಲಿ ಮೀಟಿಂಗ್ ನಡೆಸಿದ್ದು 22 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ. ಗೋ ಬ್ಯಾಕ್ ವಿರೋಧದ ನಡುವೆ ಉಡುಪಿ -ಚಿಕ್ಕಮಗಳೂರಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಮತ್ತೆ ಅವಕಾಶ ಲಭಿಸಲಿದೆ.​ ಪ್ರತಾಪ್ ಸಿಂಹಗೆ ಶಾಕ್ ಎದುರಾಗಿದೆ.

195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಕಮಲಕಲಿಗಳು ಹೆಸರು ಘೋಷಣೆ ಆಗಿರಲಿಲ್ಲ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 22 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ ಆಗಿದೆ. 2 ಹಂತದಲ್ಲಿ ಪಟ್ಟಿ ರಿಲೀಸ್ ಆಗಲಿದೆ.

​​ಪ್ರತಾಪ್ ಸಿಂಹಗೆ ಟಿಕೆಟ್ ಸಿಗಲ್ಲ ಅನ್ನೋ ಚರ್ಚೆ ಸತ್ಯವಾಗಿದೆ. ಮೈಸೂರು-ಕೊಡಗು ಕ್ಷೇತ್ರದಿಂದ ಯದುವೀರ್ ಒಡೆಯರ್​ಗೆ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರ.. ಸುಧಾಕರ್ ಹಾಗೂ ವಿಶ್ವನಾಥ್ ಪುತ್ರನ ನಡುವೇ ರೇಸ್ ಏರ್ಪಟ್ಟಿತ್ತು. ಅಂತಿಮವಾಗಿ ಸುಧಾಕರ್​ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.

ಮಾಧುಸ್ವಾಮಿ ಸೇರಿದಂತೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸ್ತಿರೋ ನಡುವೆಯೂ ತುಮಕೂರಿಗೆ ವಿ.ಸೋಮಣ್ಣಗೆ ಟಿಕೆಟ್ ಪಕ್ಕಾ ಆಗಿದೆ. ವಿಧಾನಸಭಾ ಚುನಾವಣೆಯಲ್ಲಾದ ಅನ್ಯಾಯವನ್ನ ಈ ಮೂಲಕ ಸರಿಪಡಿಸಿದಂತೆ ಕಾಣಿಸ್ತಿದೆ.

ಹಾವೇರಿಯಲ್ಲಿ ಶಿವಕುಮಾರ್ ಉದಾಸಿ ನಿವೃತ್ತಿಯ ಕಾರಣ ಖಾಲಿ ಇದ್ದ ಸೀಟ್​ಗೆ ಈಶ್ವರಪ್ಪ ಪಟ್ಟು ಬಿಗಿಯಾಗಿತ್ತು. ಪುತ್ರ ಕಾಂತೇಶ್​ಗಾಗಿ ಅಭಿಮಾನಿಗಳು ಟಿಕೆಟ್ ಗೆ ಬೇಡಿಕೆ ಇಟ್ಟಿದ್ದರು. ಆದ್ರೆ ಗೆಲ್ಲೋ ಅಭ್ಯರ್ಥಿಗೆ ಮಣೆ ಹಾಕಿದಂತೆ ಕಾಣ್ತಿರೋ ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಹೆಸರನ್ನ ಲಾಕ್ ಮಾಡ್ಕೊಂಡಿದೆ.

ಚಿಕ್ಕೋಡಿ ಟಿಕೆಟ್​ಗೋಸ್ಕರ ಸಕಲಾಸ್ತ್ರ ಪ್ರಯೋಗಿಸಿದ್ದ ರಮೇಶ್ ಕತ್ತಿಗೆ ಕೊನೆಗೂ ಟಿಕೆಟ್ ಸಿಕ್ಕೋದು ಕನ್ಫರ್ಮ್ ಆಗಿದೆ. ಒಂದು ಮಟ್ಟದಲ್ಲಿ ಪಕ್ಷ ಬಿಡೋಕೂ ಸಜ್ಜಾಗಿದ್ದ ‘ಕತ್ತಿ’ವರಸೆಗೆ ಬಿಜೆಪಿ ಮಣಿದಂತಿದೆ. ಸಂಸದ ಅಣ್ಣಾ ಸಾಹೇಬ್​ ಜೊಲ್ಲೆಗೆ ಅನಿರೀಕ್ಷಿತ ಶಾಕ್ ಎದುರಾಗಿದೆ. ಅದಲು ಬದಲಿನ ಆಟದಲ್ಲಿ ಡಾ.ಸಿಎನ್ ಮಂಜುನಾಥ್​ಗೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಟಿಕೆಟ್ ಸಿಕ್ಕೋದು ಪಕ್ಕಾ ಆಗಿದೆ. ಡಿ.ಕೆ ಸುರೇಶ್ ವಿರುದ್ಧ ಡಾಕ್ಟ್ತು ಸ್ಪರ್ಧಿಸಲಿದ್ದು, ಮತ್ತೊಮ್ಮೆ ಡಿಕೆಶಿ-ಗೌಡರ ಫ್ಯಾಮಿಲಿ ನಡುವೆ ಕದನಕ್ಕೆ ರಾಜ್ಯ ಸಾಕ್ಷಿಯಾಗಲಿದೆ.

ಹಾಲಿ 7 ಸಂಸದರಿಗೆ ಟಿಕೆಟ್ ನೀಡದಿರಲು ನಿರ್ಧಿರಿಸಿರೋ ಬಿಜೆಪಿ ಹೈಕಮಾಂಡ್ ಪರ್ಯಾಯ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಇನ್ನು, 6 ಹಾಲಿ ಎಂಪಿಗಳಿಗೆ ಮತ್ತೆ ಟಿಕೆಟ್ ಗ್ಯಾರಂಟಿಯಾಗಿದೆ.

ಬೆಳಗಾವಿಯಿಂದ ಹಾಲಿ ಸಂಸದೆ ಮಂಗಳಾ ಅಂಗಡಿಗೆ ಈ ಬಾರಿ ಟಿಕೆಟ್ ನೀಡದಿರಲು ಕಮಲಪಡೆ ನಿರ್ಧರಿಸಿದ್ದು, ನಿರೀಕ್ಷೆಯಂತೆ ಅಂಗಡಿ ಬೀಗರಿಗೆ ಜಗದೀಶ್ ಶೆಟ್ಟರ್​ಗೆ ಮಣೆ ಹಾಕಲಾಗ್ತಿದೆ.

ವಿಜಯಪುರದಿಂದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಬದಲು ಗೋವಿಂದ ಕಾರಜೋಳ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಚಿತ್ರದುರ್ಗಕ್ಕೆ ಎ.ನಾರಾಯಣಸ್ವಾಮಿ ಕನ್ಫರ್ಮ್ ಆದ್ರೆ, ಶಿವಮೊಗ್ಗದಿಂದ ಬಿ.ವೈ ರಾಘವೇಂದ್ರ ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಿ ಸಿ ಮೋಹನ್​ಗೆ ಮತ್ತೊಮ್ಮೆ ಟಿಕೆಟ್ ಒಲಿಯಲಿದೆ. ಬೆಂಗಳೂರು ದಕ್ಷಿಣದಿಂದ ಸಂಸದ ತೇಜಸ್ವಿ ಸೂರ್ಯಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ

ಮೊದಲ ಹಂತದಲ್ಲಿ 22 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಇದಿಷ್ಟು ಸಭೆಯಲ್ಲಿ ಚರ್ಚೆಯಾಗಿ ಅಂತಿಮಗೊಳಿಸಿರೋ ಹೆಸರುಗಳು. ಆದ್ರೆ ಅಂತಿಮವಾಗಿ ಹೈಕಮಾಂಡ್ ರಿಲೀಸ್ ಮಾಡಲಿರೋ ಪಟ್ಟಿ ಇಂದು, ನಾಳೆ ಹೊರಬೀಳಲಿದೆ.

Related Articles

Back to top button