ಬಿಜೆಪಿ ಜೊತೆ ಮೈತ್ರಿ ಬಳಿಕ ಹೆಚ್.ಡಿ ಕುಮಾರಸ್ವಾಮಿಗೆ ಒಂದಿಲ್ಲೊಂದು ಚಿಂತೆ..ದಿಢೀರ್ ಮೌನಕ್ಕೆ ಶರಣು..!!

Views: 62
ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದಿಲ್ಲೊಂದು ಚಿಂತೆ..ದಿಢೀರ್ ಮೌನಕ್ಕೆ ಶರಣಾಗಿದ್ದಾರೆ.ಮೈತ್ರಿಯಲ್ಲಿ ಯಶಸ್ಸಿಗಿಂತ ದಳಪತಿಗಳಿಗೆ ಟೆನ್ಷನ್ ಹೆಚ್ಚಾದಂತೆ ಕಂಡಿದೆ.
ಲೋಕ ಸಭೆ ಚುನಾವಣೆಯಲ್ಲಿ ‘ಮೈತ್ರಿ’ ವಿಜಯಕ್ಕೆ ಕುಮಾರಸ್ವಾಮಿ ಪ್ಲಾನ್ ಮಾಡಿದ್ದರು. ಆದರೆ ಮೈತ್ರಿಮಾಡಿಕೊಂಡ ಬೆನ್ನಲ್ಲೇ ಕುಮಾರಸ್ವಾಮಿಗೆ ಒಂದಿಲ್ಲೊಂದು ಚಿಂತೆ ಶುರುವಾಗಿದ್ಯಂತೆ. ಅದಕ್ಕೆ ಸಾಕ್ಷಿ ಕುಮಾರಸ್ವಾಮಿ ಅವರ ಮೌನ ಎಂದು ವಿಶ್ಲೆಷಿಸಲಾಗುತ್ತಿದೆ. ಮೈತ್ರಿಗೂ ಮೊದಲು ಕುಮಾರಸ್ವಾಮಿ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮೈತ್ರಿ ಬೆನ್ನಲ್ಲೇ ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೂ, ಹೆಚ್ಡಿಕೆ ಸುಮ್ಮನಿದ್ದಾರೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿಗೆ ಮೈತ್ರಿಯಿಂದ ಚಿಂತೆಗೆ ಏನು..ಕಾರಣ?
*ಬಿಜೆಪಿ-ದಳ ಮೈತ್ರಿಯಿಂದ ಸಕ್ಸಸ್ಗಿಂತ ದಳಪತಿಗೆ ಬೇಸರವೇ ಹೆಚ್ಚು
*ಮೈತ್ರಿ ಮುನ್ನ ಪಕ್ಷ ತೊರೆದಿದ್ದ ಗೌರಿಶಂಕರ್, ದಾಸರಹಳ್ಳಿ ಮಂಜುನಾಥ
*ಸದ್ಯ ಪಕ್ಷದಿಂದ ಅಂತರ ಕಾಯ್ದುಕೊಂಡ ಶರಣುಗೌಡ ಕಂದಕೂರು
*ದಳಪತಿಗಳ ಭದ್ರಕೋಟೆ ಹಾಸನ, ಮಂಡ್ಯ ಸೀಟು ಹಂಚಿಕೆ ಗೊಂದಲ ಟಿಕೆಟ್ ಗಾಡಿ ಪಟ್ಟು ಹಿಡಿದು ಸುಮಲತಾ…
*ಬಿಜೆಪಿ ನಾಯಕರು ಕ್ಯಾರೇ ಅನ್ನದೆ ದ್ವಂದ್ವ ಹೇಳಿಕೆಗಳಿಂದ ಕುಮಾರಸ್ವಾಮಿಗೆ ಬೇಸರ..
*ಮಂಡ್ಯ ಆಯಿತು.. ಹಾಸನ ಬಳಿಕ ಈಗ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಟ್ಟು ಸಡಿಲಾಗಲಿಲ್ಲ
*ಕೋಲಾರ ‘ಲೋಕಸಭಾ ಟಿಕೆಟ್ ನಂಗೇ ಬೇಕೆಂದು ಪಟ್ಟು ಹಿಡಿದಿರೋ ಮುನಿಸ್ವಾಮಿ..
*ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಉಪ ಚುನಾವಣೆಯಲ್ಲೂ ಸೋಲು..
*ರಾಜ್ಯಸಭೆ ಚುನಾವಣೆಗೆ ಕೈ ಕೊಡುವ ಸೂಚನೆ ನೀಡಿದ ಸ್ವಪಕ್ಷದ ಜೆಡಿಎಸ್ ಶಾಸಕ..
*ಅಡ್ಡ ಮತದಾನ ಆಗುತ್ತೆ ಎಂಬ ಶಾಸಕ ಶರಣುಗೌಡ ಕಂದಕೂರು ಹೇಳಿಕೆ
*ಶರಣುಗೌಡ ಮೈತ್ರಿ ಅಭ್ಯರ್ಥಿ ಪರ ಮತ ಚಲಾಯಿಸುವ ಸಾಧ್ಯತೆ ಕಡಿಮೆ
ಹೀಗೆ ಮೈತ್ರಿ ಬಳಿಕ ಒಂದಿಲ್ಲೊಂದು ವಿಚಾರದಲ್ಲಿ ಕುಮಾರಸ್ವಾಮಿಗೆ ಹಿನ್ನಡೆ
ಈ ಮೇಲಿನ ಎಲ್ಲಾ ಕಾರಣಗಳಿಂದ ಕುಮಾರಸ್ವಾಮಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೆಲ್ಲಲೇಬೇಕು ಎಂದು ಸರ್ಕಸ್ ನಡೆಸುತ್ತಿರುವ ಕುಮಾರಸ್ವಾಮಿ, ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಫಲ ಕೊಡುತ್ತದೆ ಎಂದು ಕಾದು ನೋಡಬೇಕಿದೆ.