ಸಾಂಸ್ಕೃತಿಕ

ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬನ ಜೊತೆ ಸ್ನೇಹ, ಗಂಡನಿಂದ ದೂರಾದ ಕಿರುತೆರೆ ನಟಿ

Views: 560

ಕನ್ನಡ ಕರಾವಳಿ ಸುದ್ದಿ: ಬಿಗ್‌ ಬಾಸ್‌ ರಿಯಾಲಿಟಿ ಶೋ ವಿನ್ನರ್‌ ಪಟ್ಟಕ್ಕಾಗಿ ಸ್ಪರ್ಧಿಗಳು ಒಂಟಿ ಮನೆಯಲ್ಲಿ ಹೊರಗಿನ ಸಂಪರ್ಕ ಇಲ್ಲದೇ ನೂರು ದಿನ ಹೋರಾಡುತ್ತಾರೆ. ಇದರಲ್ಲಿ ಕೆಲವರು ಒಂದೇ ವಾರ ಮನೆಯಿಂದ ಹೊರಗೆ ಹೋದರೆ ಇನ್ನೂ ಕೆಲವರೆಗೂ ಇರುತ್ತಾರೆ.

ಮೊಬೈಲ್‌, ಟಿವಿ ಸೇರಿದಂತೆ ಯಾವುದೇ ಹೊರಗಿನ ಸಂಪರ್ಕ ಇಲ್ಲದೇ ದಿನ ಕಳೆಯುವ ಸ್ಪರ್ಧಿಗಳಿಗೆ ಮನೆಯಲ್ಲಿರುವ ಇತರ ಸ್ಪರ್ಧಿಗಳು ಮಿತ್ರರು-ಎದುರಾಳಿಗಳು ಆಗುತ್ತಾರೆ. ಈ ಸಮಯದಲ್ಲಿ ಒಂದೇ ಮನಸ್ಥಿತಿಯ ಕೆಲವು ಸ್ಪರ್ಧಿಗಳ ನಡುವೆ ಪರಸ್ಪರ ಸ್ನೇಹ ಬೆಳೆಯುವುದು ಸಾಮಾನ್ಯ. ಇನ್ನೂ ಕೆಲವೊಮ್ಮೆ ಈ ಸ್ನೇಹವು ಪ್ರೀತಿಯಾಗಿ ಕೂಡ ಬದಲಾಗುವುದುಂಟು. ಬಿಗ್‌ ಬಾಸ್‌ ಮನೆಯ ಒಳಗೆ ಆಗುವ ಈ ಸ್ನೇಹ-ಪ್ರೀತಿಯಿಂದ ಸ್ಪರ್ಧಿಗಳ ವೈಯಕ್ತಿಯ ಜೀವನದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಕಿರುತೆರೆ ನಟಿಯೊಬ್ಬರ ಜೀವನದಲ್ಲಿಯೂ ಈಗ ಇದೇ ರೀತಿಯ ಘಟನೆ ನಡೆದಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ದಕ್ಷಿಣ ಭಾರತದ ಮಲಯಾಳಂ ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ನಟಿ ವೀಣಾ ನಾಯರ್ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮಲಯಾಳಂ ಬಿಗ್ ಬಾಸ್‌ನ ಸ್ಪರ್ಧಿಯಾಗಿದ್ದ ವೀಣಾ ನಾಯರ್ ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬ ವ್ಯಕ್ತಿಯ ಜೊತೆ ಸ್ನೇಹ ಬೆಳೆಸಿರುವುದು ಪತಿಯ ಕೋಪಕ್ಕೆ ಕಾರಣವಾಗಿದ್ದು, ಇದರಿಂದಲೇ ಇಬ್ಬರು ದೂರಾಗಿದ್ದಾರೆ ಎನ್ನಲಾಗುತ್ತಿದೆ.

ನಟಿ ವೀಣಾ ನಾಯರ್ ಡಿವೋರ್ಸ್ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದರೂ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಸ್ವತಃ ವೀಣಾ ನಾಯರ್ ಈ ಬಗ್ಗೆ ಮಾತನಾಡಿದ್ದು, ‘ಪತಿಯಿಂದ ದೂರವಾಗಿ ವಾಸ ಮಾಡುತ್ತಿದ್ದರೂ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ನಮ್ಮಿಬ್ಬರ ನಡುವಿನ ಸಮಸ್ಯೆಯಿಂದ ದೂರವಾಗಿದ್ದೇವೆ. ಆದರೆ ಅದು ನನ್ನ ಮಗನ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಮಗ ಇಬ್ಬರ ಜೊತೆಗೂ ಇರುತ್ತಾನೆ. ನಾನು ತಾಯಿ ಪ್ರೀತಿ ಮಾತ್ರ ಕೊಡಬಹುದು, ತಂದೆ ಪ್ರೀತಿಯಲ್ಲ. ಹೀಗಾಗಿ ಅವನು ಇಬ್ಬರ ಜೊತೆಗೂ ಸಮಯ ಕಳೆಯುತ್ತಾನೆ. ಆದರೆ ನಾವಿಬ್ಬರು ಬೇರೆಯಾಗಿದ್ದೇವೆ’ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Related Articles

Back to top button