ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: “ಚಿತ್ರಸಿರಿ” ಚಿತ್ರಕಲಾ ಸ್ಪರ್ಧೆ, ಚಲನಚಿತ್ರ ಕಲಾವಿದರಿಗೆ ಸನ್ಮಾನ

Views: 377
ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಚಿತ್ರಸಿರಿ” ಚಿತ್ರಕಲಾ ಸ್ಪರ್ಧೆ ಮತ್ತು ಸಾಸ್ತಾನ ಮಠದ ತೋಟದ ಕುಟುಂಬಿಕರಿಂದ ನಡೆದ 233ನೇ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸ್ಕೂಲ್ ಲೀಡರ್ ಚಲನಚಿತ್ರ ಕಲಾವಿದರನ್ನು ಜುಲೈ 6ರಂದು ಗೌರವಿಸಲಾಯಿತು.
“ಚಿತ್ರಸಿರಿ” ಸ್ಪರ್ಧೆಯಲ್ಲಿ ಐದನೇ ತರಗತಿಯೊಳಗಿನ ನಿನಾದ್, ಆಶ್ಲೇಶ್, ದಿಕ್ಷೀತ್ 6 ರಿಂದ 10 ನೇ ತರಗತಿಯೊಳಗಿನ ಸಿಂಚನಾ, ನಮ್ರತಾ, ವಿಮರ್ಶ್ ಪಿಯುಸಿಯಿಂದ ಪದವಿವರೆಗಿನ ಸ್ಪರ್ಧೆಯಲ್ಲಿ ಪ್ರಜ್ಞಾ, ಮೇಘನಾ, ಪ್ರಜ್ವಲ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ನಿರ್ಣಾಯಕರಾಗಿ ಡಾ. ಜಯರಾಮ್ ಶೆಟ್ಟಿಗಾರ್, ಶಂಕರನಾರಾಯಣ ಶೆಟ್ಟಿಗಾರ್ ಕಾರ್ಕಡ, ವಿಠಲ ಶೆಟ್ಟಿಗಾರ್ ಸಗ್ರಿ ಭಾಗವಹಿಸಿದ್ದರು.ನೀಲಾವರ ಕುಟುಂಬಿಕರು ಬಹುಮಾನದ ಪ್ರಾಯೋಜಕರಾಗಿದ್ದರು.
ಇದೇ ಸಂದರ್ಭದಲ್ಲಿ ಸ್ಕೂಲ್ ಲೀಡರ್ ಚಲನಚಿತ್ರದ ನಟರಾದ ಅಶ್ವಿನಿ, ಶ್ರೀಜಯ್, ರಿತ್ವಿಕ್ ಮತ್ತು ಶಿಲ್ಪ ಕಲಾ ಸಾಧಕ ಯೊಗೀಂದ್ರ ಶ್ರೀವತ್ಸ ಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಹೆಚ್.ಎ. ಗೋಪಾಲ್ ಅವರು ಸಾಧಕರಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಗೌರವ ಧನ ನೀಡಿ ಕಾರ್ಯಕ್ರಮ ನಿರೂಪಿಸಿದರು.
ಅನಾರೋಗ್ಯ ಪೀಡಿತರಾದ ಜಪ್ತಿ ಮಾಗಣೆಯ ಗುರಿಕಾರರಾದ ಶ್ರೀ ಕೃಷ್ಣ ಶೆಟ್ಟಿಗಾರ್ ಅವರಿಗೆ ದೇವಳದ ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ದೇಗುಲದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿಗಾರ್, ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಕಾರ್ಯದರ್ಶಿ ಜನಾರ್ಧನ್ ಶೆಟ್ಟಿಗಾರ್, ವೀರೇಶ್ವರ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿಗಾರ್, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಯುವ ವೇದಿಕೆಯ ಅಧ್ಯಕ್ಷ ಸಂಜೀವ ಶೆಟ್ಟಿಗಾರ್ ಸಾಸ್ತಾನ, ಸಂಘಟನಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಸಂತೆಕಟ್ಟೆ, ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ ದೇವಳದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನಾರ್ಧನ್ ಶೆಟ್ಟಿಗಾರ್ ವರದಿ ವಾಚಿಸಿದರು. ಚಂದ್ರಶೇಖರ್ ಹೊಸಾಳ ಲೆಕ್ಕಪತ್ರ ಮಂಡಿಸಿದರು. ಡಾ.ಶಿವಪ್ರಸಾದ್ ಶೆಟ್ಟಿಗಾರ್, ನಾರಾಯಣ್ ಶೆಟ್ಟಿಗಾರ್ ಹಂದಾಡಿ ಕಾರ್ಯಕ್ರಮ ನಿರೂಪಿಸಿದರು.


