ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇಗುಲ ಗೆಂಡೋತ್ಸವ,ಹಾಲು ಹಬ್ಬ ಸಂಪನ್ನ

Views: 145
ಉಡುಪಿ: ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇಗುಲದಲ್ಲಿ ಫೆಬ್ರವರಿ 19 ರಿಂದ 21 ರವರೆಗೆ ನಡೆದ ರಂಗ ಪೂಜೆ, ಗೆಂಡಸೇವೆ, ಡೆಕ್ಕೆ ಬಲಿ, ಚಂಡಿಕಾ ಹೋಮ, ವಾರ್ಷಿಕ ಪೂಜೆ, ಹಾಲು ಹಬ್ಬ ಸಂಪನ್ನಗೊಂಡಿದೆ.
ಇದೇ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿ ಮತ್ತು ಟ್ರಸ್ಟ್ ನ ವಾರ್ಷಿಕ ಮಹಾಸಭೆ ನಡೆಯಿತು
ದೇವಳದ ಆಡಳಿತ ಮೊಕ್ತೇಸರರಾದ ಡಾ.ಸಿ.ಜಯರಾಮ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ‘ಧರ್ಮ ಆಚರಣೆಯಿಂದ ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಭಗವಂತನಲ್ಲಿ ಶರಣಾಗತಿ ಮೂಲಕ ಅಂತರಂಗದ ಸಿರಿ ಹೆಚ್ಚಿಸಿ ಬಹಿರಂಗದಲ್ಲಿ ನಲಿವು ಗೆಲುವು ಶಾಂತಿ ನೆಮ್ಮದಿ ನೆಲೆಸಿ ಸ್ವಸ್ಥ ಸಮಾಜ ನಮ್ಮದಾಗುತ್ತದೆ ಎಂದರು’.
ಈ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಅನ್ನದಾನ ಸೇವಾಕರ್ತರಾದ ಶ್ರೀಮತಿ ಹೇಮಲತಾ ಮತ್ತು ಚಂದ್ರಶೇಖರ್.ವಿ.ಎಸ್, ಶ್ರೀಮತಿ ಶಿಲ್ಪ ಮತ್ತು ಇಂಧನ ಬೆಂಗಳೂರು, ಶ್ರೀಮತಿ ಗೀತಾ ಮತ್ತು ರಾಧಾಕೃಷ್ಣ ಶೆಟ್ಟಿಗಾರ ತೊಂತ್ಸೆ, ಚಂಡಿಕಾ ಹೋಮ ಸೇವಾಕರ್ತರಾದ ಬಾರಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ,ದೇಗುಲಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಾಧಕರಾದ ಪ್ರಭಾಕರ್ ಶೆಟ್ಟಿಗಾರ್ ಜಿತೇಶ್, ಕಿರಣ್ ಕುಮಾರ್ ಹೆಂಗವಳ್ಳಿ, ಸಾಮಾಜಿಕ ನಾಯಕತ್ವ ಪ್ರಶಸ್ತಿ ಪುರಸ್ಕೃತ ನಾರಾಯಣ ಶೆಟ್ಟಿಗಾರ್ ಸುರತ್ಕಲ್ ,ಕಾರ್ಕಡ ಪದ್ಮನಾಭ ಶೆಟ್ಟಿಗಾರ, ಕಾರ್ತಿಕ್ ಪದ್ಮಶಾಲಿ, ವಿಶ್ವನಾಥ ಶೆಟ್ಟಿಗಾರ, ವೀರಭದ್ರ ಶೆಟ್ಟಿಗಾರ ಇನ್ನಿತರ ಸಾಧಕರು ಹಾಗೂ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಮತ್ತು ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಿ ಶ್ರೀನಿವಾಸ್ ಶೆಟ್ಟಿಗಾರ, ಮಾಜಿ ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಶೆಟ್ಟಿಗಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹೆಚ್ಎ ಗೋಪಾಲ್ ಸುರತ್ಕಲ್, ನಾರಾಯಣ ಶೆಟ್ಟಿಗಾರ,ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಆಶಾ ವಿಠಲ ಶೆಟ್ಟಿಗಾರ, ಸಂಘಟನಾ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿಗಾರ, ಕೊಳಂಬೆ ಶ್ರೀನಿವಾಸ ಶೆಟ್ಟಿಗಾರ, ಕೃಷ್ಣ ಶೆಟ್ಟಿಗಾರ ಜಪ್ತಿ, ಗೋಪಾಲ ಶೆಟ್ಟಿ ಗಾರ ಬಸ್ರೂರು, ನರಸಿಂಹ ಶೆಟ್ಟಿಗಾರ ಬಳ್ಮನೆ, ಪರಿವಾರ ದೈವಗಳ ಅರ್ಚಕ ಉದಯ ಶೆಟ್ಟಿಗಾರ,ಚಂದ್ರಶೇಖರ್ ಶೆಟ್ಟಿಗಾರ ಬಾರ್ಕೂರು, ರಾಮ್ ಶೆಟ್ಟಿಗಾರ ಕೊಡ್ಲಾಡಿ, ಚಂದ್ರಶೇಖರ್ ವಿ ಎಸ್, ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಸುರೇಶ್ ಹೆಂಗವಳ್ಳಿ, ರಘುರಾಮ ಶೆಟ್ಟಿಗಾರ ಬಾರ್ಕೂರು, ವಿನಯ್ ಕುಮಾರ್ ಸಿ ಕೆ, ವಿಠಲ ಶೆಟ್ಟಿಗಾರ, ಶ್ರೀಮತಿ ಕವಿತಾ ಜಯರಾಮ್ ಸಭೆಯಲ್ಲಿ ಉಪಸ್ಥಿತರಿದ್ದರು.
ಡಾ. ಶಿವಪ್ರಸಾದ್ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ ವರದಿ ವಾಚಿಸಿದರು. ಕೋಶಾಧಿಕಾರಿ ಅರುಣ್ ಕುಮಾರ್ ಅಯ-ವ್ಯಯ ಮಂಡಿಸಿದರು. ಸುಧಾಕರ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು.