ಶಿಕ್ಷಣ

ಫೋನ್ ಕಿತ್ತುಕೊಂಡಿದ್ದಕ್ಕೆ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ!

Views: 319

ಕನ್ನಡ ಕರಾವಳಿ ಸುದ್ದಿ: ಫೋನ್ ಕಿತ್ತುಕೊಂಡಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೊಬ್ಬಳು ಉಪನ್ಯಾಸಕಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿದ್ಯಾರ್ಥಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿದ್ಯಾರ್ಥಿನಿ ಫೋನ್‌ನಲ್ಲಿ ಮಾತನಾಡುವಾಗ ಉಪನ್ಯಾಸಕಿ ಆಕೆಯ ಫೋನ್ ಕಿತ್ತುಕೊಂಡಿದ್ದಾಳೆ. ಆಗ ಕೋಪಗೊಂಡ ವಿದ್ಯಾರ್ಥಿನಿ ಫೋನ್ ನೀಡುವಂತೆ ಒತ್ತಾಯಿಸಿದ್ದಾಳೆ. ಈ ದೃಶ್ಯ ಇತರ ವಿದ್ಯಾರ್ಥಿಗಳ ಫೋನ್‌ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿ ತನ್ನ ಫೋನ್ 12,000 ರೂಪಾಯಿ ಮೌಲ್ಯದ್ದಾಗಿದೆ ಕೊಟ್ಟುಬಿಡಿ ಎಂದು ಉಪನ್ಯಾಸಕಿಯೊಂದಿಗೆ ಜಗಳ ಆಡಿದ್ದಾಳೆ. ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದಾಗ ವಿದ್ಯಾರ್ಥಿನಿ ಬಾಯಿಗೆ ಬಂದಂತೆ ನಿಂದಿಸಿದ್ದಾಳೆ.

ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ವಿದ್ಯಾರ್ಥಿನಿ ಕಾಲಲ್ಲಿ ಇದ್ದ ಚಪ್ಪಲಿ ಕಳಚಿ ಉಪನ್ಯಾಸಕಿಗೆ ಹೊಡೆದಿದ್ದಾಳೆ. ಈ ದೃಶ್ಯವು ಅಲ್ಲಿದ್ದ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬೆಚ್ಚಿಬೀಳಿಸಿದೆ. ಶಿಕ್ಷಕಿ ಕೂಡ ಆಕೆಯ ಮೇಲೆ ಕೈ ಮಾಡಲು ಮುಂದಾದರು. ಆಗ ಜಗಳ ವಿಕೋಪಕ್ಕೆ ಹೋದಾಗ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಅವರ ಜಗಳವನ್ನು ಬಿಡಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾರೆ.

ಈ ಘಟನೆಯು ಕೇವಲ ಒಬ್ಬ ಶಿಕ್ಷಕರಿಗೆ ಮಾಡಿದ ಅವಮಾನವಲ್ಲ, ಇದು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ನಮ್ಮ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ವ್ಯಾಪಕ ಆಕ್ರೋಶ ಕೇಳಿಬಂದಿದೆ.

Related Articles

Back to top button