ಫೋಟೋಶೂಟ್ಗೆ ಹೋಗಬೇಡ ಎಂದ ಪೋಷಕರು, ಯುವತಿ ನೇಣಿಗೆ ಶರಣು

Views: 173
ಫೋಟೋಶೂಟ್ಗೆ ಹೋಗಬೇಡ ಎಂದು ಪೋಷಕರು ಬುದ್ಧಿ ಹೇಳಿದಕ್ಕೆ ಮನನೊಂದ ಯುವತಿ ಸಾವಿಗೆ ಶರಣಾದ ದುರಂತ ಘಟನೆ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನಲ್ಲಿ ನಡೆದಿದೆ.ವರ್ಷಿಣಿ (21) ಆತ್ಮಹತ್ಯೆಗೆ ಶರಣಾಗಿರುವ ಯುವತಿ.
ಸುಧಾಮ ನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಯುವತಿ ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಓದುತ್ತಿದ್ದಳು. ಹೊಸ ವರ್ಷದ ದಿನವೇ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಮೃತ ವರ್ಷಿಣಿ ಬಿಬಿಎ ಜೊತೆಗೆ ಫೋಟೋಗ್ರಫಿ ಸಹ ಓದುತ್ತಿದ್ದಳು. ಇನ್ನು ಆಕೆಗೂ ಫೋಟೋ ಶೂಟ್ ಎಂದರೆ ಅಚ್ಚುಮೆಚ್ಚಾಗಿತ್ತು. ಮೊಬೈಲ್‌ನಲ್ಲೇ ಫೋಟೋಗಳನ್ನು ತೆಗೆಯುವುದು, ರೀಲ್ಸ್ ವಿಡಿಯೋಗಳನ್ನು ಮಾಡುತ್ತಿದ್ದಳು. ನಿನ್ನೆ ವರ್ಷಾಂತ್ಯ ಆಚರಣೆ ಜೊತೆಗೆ ವರ್ಷಿಣಿ ನಿನ್ನೆ ಮಾಲ್ಗೆ ಹೋಗಿ ಫೋಟೋಶೂಟ್ ಮಾಡಿಸಬೇಕು ಎಂದು ಸಿದ್ಧಳಾಗಿದ್ದಳು.
ಆದರೆ ಪೋಷಕರು ಮಾಲ್ಗೆ ಹೋಗಬೇಡ, ಫೋಟೋ ಶೂಟ್ ಎಂದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೆ ಮನನೊಂದ ಯುವತಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯುವತಿ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವಿಲ್ಸನ್ ಗಾರ್ಡನ್ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.