ಫೆ.16 ರಿಂದ 20, ಶ್ರೀ ಕ್ಷೇತ್ರ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಳ”ವಾರ್ಷಿಕ ಜಾತ್ರಾ ಮಹೋತ್ಸವ”

Views: 223
ಬ್ರಹ್ಮಾವರ :ಶ್ರೀ ಕ್ಷೇತ್ರ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 16 ರಿಂದ 20 ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ದಿನಾಂಕ 16.2.2024ನೇ ಶುಕ್ರವಾರ ಸಂಜೆ ಕುಮಾರ ಚಾವಡಿಯಲ್ಲಿ ಬಾಳು ಭಂಡಾರ ಪೂಜೆ ನಂತರ ತೆಂಕು ಸವಾರಿ ಉತ್ಸವ ಹಾಗೂ ದೇವಳದಲ್ಲಿ ರಂಗ ಪೂಜೆ
ದಿನಾಂಕ 17.2.2024ನೇ ಶನಿವಾರ ಬೆಳಿಗ್ಗೆ 8 ರಿಂದ ಗಣಯಾಗ ಚಂಡಿಕಾಯಾಗ ಹಾಗೂ ಮಹಾಪೂಜೆ. ಮಧ್ಯಾಹ್ನ 12:30 ರಿಂದ ಅನ್ನಸಂತರ್ಪಣೆ
ಸಂಜೆ 7:30 ರಿಂದ ಬಡಸಾಲಿಕೇರಿ ಉತ್ಸವ ಗೆಂಡ ಸೇವೆ ಹಾಗೂ ದೊಡ್ಡ ರಂಗ ಪೂಜೆ
ದಿನಾಂಕ 18.02.2024ನೇ ಆದಿತ್ಯವಾರ ಬೆಳಿಗ್ಗೆ 8 ರಿಂದ ಪ್ರಧಾನ ಹೋಮ, ಕಲಶಾಭಿಷೇಕ, ತುಲಾಭಾರ ಸೇವೆ, ರಥಾರೋಹಣ ಹಾಗೂ ಮಹಾಪೂಜೆ
ಮಧ್ಯಾಹ್ನ 12:30ಕ್ಕೆ ಮಹಾ ಅನ್ನಸಂತರ್ಪಣೆ
ಸಂಜೆ ದೇವಸ್ಥಾನದಿಂದ ಬಡಾಸಾಲಿಕೇರಿಯವರೆಗೆ ರಥೋತ್ಸವ
19.02.2024ನೇ ಸೋಮವಾರ ರಾತ್ರಿ 10 ರಿಂದ ಕಲ್ಲುಕುಟಿಗನ ಕೋಲ ಸೇವೆ
20.02.2024ನೇ ಮಂಗಳವಾರ ಬೆಳಿಗ್ಗೆ 8 ರಿಂದ ಸಂಪ್ರೋಕ್ಷಣೆ,ಶ್ರೀ ಕುಮಾರ ಮಂದಿರದಲ್ಲಿ ಪ್ರಸಾದ ವಿತರಣೆ
ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು- -ಮನ -ಧನ ಸಹಾಯ ನೀಡಿ, ಶ್ರೀದೇವರ ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಶ್ರೀ ಎಸ್ ಸುರೇಶ್ ಶೆಟ್ಟಿಗಾರ್, ಆಡಳಿತ ಮೊಕ್ತೇಸರರು.
ಸಹ ಮೊಕ್ತೇಸರರು, ಗುರಿಕಾರರು, ತಂತ್ರಿಗಳು, ಅರ್ಚಕರು, ವಾರಂಬಳ್ಳಿಯವರು, ಹೆಗ್ಡೆಯವರು, ಅಭಿವೃದ್ಧಿ ಟ್ರಸ್ಟ್( ರಿ) ಸಾಲಿಕೇರಿ ಸೇವಾ ಸಮಿತಿ, ಸಾಲಿಕೇರಿ, ಆರು ಮಾಗಣೆ, 7 ಗ್ರಾಮದ 10 ಸಮಸ್ತರು
ಸರ್ವರಿಗೂ ಆದರದ ಸ್ವಾಗತ