ಸಾಂಸ್ಕೃತಿಕ
ಫೆ.11ಕ್ಕೆ, ಮರವಂತೆ ಸಾಧನಾ ಸಂಸ್ಥಾಪನಾ ದಿನಾಚರಣೆ

Views: 13
ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾದ 42ನೇ ಸಂಸ್ಥಾಪನಾ ದಿನಾಚರಣೆಯು ಫೆಬ್ರವರಿ 11ರ ಸಂಜೆ 6ಕ್ಕೆ ಇಲ್ಲಿನ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ನಡೆಯುವುದು. ಸ್ಥಾಪಕ ಸದಸ್ಯರ ಸನ್ಮಾನ, ಅಗಲಿದ ಸ್ಥಾಪಕ ಸದಸ್ಯರ ಸಂಸ್ಮರಣೆ ಬಳಿಕ ಬೈಂದೂರಿನ ಸುರಭಿ ತಂಡದಿಂದ ಗಣೇಶ ಮಂದಾರ್ತಿ ನಿರ್ದೇಶನದ ‘ಮಕ್ಕಳ ರಾಮಾಯಣ’ ಪ್ರದರ್ಶನ ನಡೆಯುವುದು ಎಂದು ಪ್ರಕಟಿಸಲಾಗಿದೆ.