ಯುವಜನ

ಪ್ರೀತಿಸುತ್ತಿದ್ದ ಗೆಳತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಯುವತಿ!

Views: 201

ಕನ್ನಡ ಕರಾವಳಿ ಸುದ್ದಿ: ತಾನು ಪ್ರೀತಿಸುತ್ತಿದ್ದ ಯುವತಿಗಾಗಿ ಮತ್ತೊಬ್ಬ ಯುವತಿ ಗಂಡಾಗಿ ಪರಿವರ್ತನೆಯಾದ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

ಇಬ್ಬರೂ ವಿವಾಹವಾಗಿ ಉತ್ತರಪ್ರದೇಶದ ಮಥುರಾದಲ್ಲಿ ವಾಸವಾಗಿದ್ದಾರೆ. ಯುವತಿಯ ಕುಟುಂಬಸ್ಥರು ನಾಪತ್ತೆ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ವಿವರ: ಸವಿತಾ ಎಂಬಾಕೆ 2017 ರಲ್ಲಿ ಜೈಪುರಕ್ಕೆ ಅಧ್ಯಯನಕ್ಕಾಗಿ ಬಂದಿದ್ದಾರೆ. ಈ ವೇಳೆ ಇಲ್ಲಿನ ಯುವತಿ ಜೊತೆ ಸ್ನೇಹ ಬೆಳೆದಿದೆ. ಬಳಿಕ ಅದು ಪ್ರೀತಿಗೆ ತಿರುಗಿದೆ. ಇಬ್ಬರೂ ಯುವತಿಯರಾಗಿದ್ದರೂ ಇಬ್ಬರ ಮಧ್ಯೆ ಆಪ್ತತೆ ಬೆಳೆದಿದೆ.

ಕೋವಿಡ್ ಸಮಯದಲ್ಲಿ, ಸವಿತಾ ಭರತ್‌ಪುರಕ್ಕೆ ವಾಪಸ್ ಆಗಿದ್ದಾರೆ. ಈ ವೇಳೆ ಇಬ್ಬರೂ ಬೇರ್ಪಟ್ಟಿದ್ದರು. ಹೀಗಿದ್ದಾಗ, ಮೊಬೈಲ್‌ ಮೂಲಕ ಮತ್ತೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. 2021ರಲ್ಲಿ ಕೊರೊನಾ ನಿಯಮಗಳು ಮುಗಿದ ಬಳಿಕ ಮರು ಭೇಟಿಯಾಗಿದ್ದಾರೆ. ಇದಾದ ನಂತರ ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ. ತನ್ನ ಪ್ರೀತಿಗಾಗಿ ಸವಿತಾ ಲಿಂಗ ಬದಲಾವಣೆಗೆ ನಿರ್ಧರಿಸಿದ್ದಳು.

ಗಂಡಾಗಿ ಬದಲಾದ ಸವಿತಾ!: ಸವಿತಾ ಆಕೆಯ ‘ಪ್ರೀತಿಯ’ ಸ್ನೇಹಿತೆಗಾಗಿ ಲಿಂಗ ಬದಲಾವಣೆಗೆ ತಮ್ಮತಮ್ಮಲ್ಲೇ ನಿರ್ಧರಿಸಿದ್ದಾರೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಸವಿತಾ ತನ್ನ ವೈದ್ಯ ಸೋದರ ಮಾವನಿಗೆ ತನ್ನ ಸ್ನೇಹಿತೆಯ ಮೇಲಿನ ಪ್ರೀತಿಯ ಬಗ್ಗೆ ಹೇಳಿದ್ದಾರೆ. ತಾನು ಲಿಂಗ ಬದಲಾವಣೆಗೆ ಇಚ್ಚಿಸಿದ್ದಾಗಿ ತಿಳಿಸಿದ್ದಾರೆ. ಆತ, ಇಂದೋರ್‌ನಲ್ಲಿರುವ ಆಸ್ಪತ್ರೆಯ ಸಂಪರ್ಕ ಮಾಡಿದ್ದಾರೆ . 2022 ರಲ್ಲಿ ಮೊದಲ ಸವಿತಾ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ನಂತರದ ಹತ್ತು ತಿಂಗಳಲ್ಲಿ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸವಿತಾ ಗಂಡಾಗಿ ಪರಿವರ್ತನೆಯಾಗಿದ್ದಾಳೆ. ಇದಕ್ಕೆ ಸುಮಾರು 15 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಳೆ.

ಸವಿತಾ ಹೋಗಿ ಲಲಿತ್ ಸಿಂಗ್ ಆದಳು: ಲಿಂಗ ಬದಲಾವಣೆಯ ನಂತರ, ದಾಖಲೆಗಳಲ್ಲಿ ತನ್ನ ಹೆಸರನ್ನು ಸವಿತಾ ಬದಲಿಗೆ ಲಲಿತ್ ಸಿಂಗ್ ಎಂದು ನಮೂದಿಸಿದ್ದಾರೆ. 24 ನವೆಂಬರ್ 2024 ರಂದು ಜೈಪುರದ ಆರ್ಯ ಸಮಾಜದ ವೇದ ಸಂಸ್ಥಾನ ಮಂಡಳಿಯಲ್ಲಿ ವಿವಾಹವಾಗಿದ್ದಾರೆ. ಬಳಿಕ ಮಥುರಾಗೆ ಹೋಗಿ ನೆಲೆಸಿದ್ದಾರೆ.

ಪೊಲೀಸರು ಇಬ್ಬರನ್ನೂ ಜೈಪುರಕ್ಕೆ ಕರೆತಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿವಾಹವಾಗಿ ಒಟ್ಟಿಗೆ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Related Articles

Back to top button