ಪ್ರತಾಪ್ ಸಿಂಹಗೆ ಟಿಕೆಟ್ ಅನುಮಾನ? ಯದುವೀರ್ ಒಡೆಯರ್, ಡಾ.ಸಿ.ಎನ್. ಮಂಜುನಾಥ್ಗೆ ಬಿಜೆಪಿ ಬಿಗ್ ಆಫರ್..!

Views: 39
ಎರಡು ಬಾರಿ ಸಂಸದರಾಗಿ, ಮೂರನೇ ಸಲ ಟಿಕೆಟ್ ನಿರೀಕ್ಷೆಯಲ್ಲಿರೋ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗೋದು ಅನುಮಾನ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿವೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ರೆ, ಯಡಿಯೂರಪ್ಪ ಅವರು ನಾಳೆ, ನಾಡಿದ್ದು ಎಲ್ಲವೂ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ.
ಬದಲಾವಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುಳಿವು ನೀಡಿದ್ದಾರೆ. ಇತ್ತ, ಇಬ್ಬರು ವರ್ಚಸ್ವಿ ವ್ಯಕ್ತಿಗಳನ್ನು ಸಂಪರ್ಕಿಸಿರುವ ಬಿಜೆಪಿ ಟಿಕೆಟ್ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ದಶಕದ ಬಳಿಕ ಮೈಸೂರು ಲೋಕಸಭಾ ಕದನ ಬದಲಾವಣೆಯತ್ತ ತೆರೆದುಕೊಳ್ತಿದೆ. ಸಂಸದ ಪ್ರತಾಪ್ ಸಿಂಹಗೆ ಮೈಸೂರು ಲೋಕಸಭಾ ಟಿಕೆಟ್ ಕೈತಪ್ಪುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಪಕ್ಷದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲಿ ಅಸಮಾಧಾನ ಹೊರಬಿದ್ದಿದ್ದು, ಪ್ರತಾಪ್ ಸಿಂಹಗೆ ಟಿಕೆಟ್ ಡೌಟ್ ಅಂತ ಹೇಳಲಾಗ್ತಿದೆ. ತಳ ಮಟ್ಟದ ಕಾರ್ಯಕರ್ತರ ಕಡೆಗಣನೆ ಆರೋಪದ ಜೊತೆ ಸ್ಥಳೀಯ ನಾಯಕರ ವಿಶ್ವಾಸಕ್ಕೆ ತಗೆದುಕೊಂಡಿಲ್ಲ ಎಂಬ ಅಭಿಪ್ರಾಯ ಬಂದಿದೆ.
ಬಿಜೆಪಿ ಟಿಕೆಟ್ ಫೈನಲ್ ಮಾಡೋದ್ರಲ್ಲಿ ಹೈಕಮಾಂಡ್ ರಣತಂತ್ರ ರೂಪಿಸ್ತಿದೆ.. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಭಾರೀ ಪ್ರಯೋಗಕ್ಕೆ ಬಿಜೆಪಿ ಚಾಣಾಕ್ಯ ಅಮಿತ್ ಶಾ ಕೈ ಹಾಕಿದ್ದಾರೆ. ಅಚ್ಚರಿ ಬೆಳವಣಿಗೆಯಲ್ಲಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಬದಲಾವಣೆ ಮಂತ್ರ ಪಠಣ ಕೇಳಲು ಸಿಗ್ತಿದೆ. ಇದಕ್ಕೆ ಕಾರಣ ಈ ಇಬ್ಬರು ನಾಯಕರ ಹೇಳಿಕೆಗಳು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತಮ, ಗೆಲ್ಲುವ ಅಭ್ಯರ್ಥಿ ಎಂಬ ಉಲ್ಲೇಖ, ಕದನ ಕಣದಲ್ಲಿ ಸಂಚಲನ ಸೃಷ್ಠಿಸಿದೆ. ಇದಕ್ಕೆ ಕಾರಣ ಮೈಸೂರು-ಕೊಡಗು ಟಿಕೆಟ್ಗಾಗಿ ಹೈಕಮಾಂಡ್ ನಡೆಸಿರುವ ಸಂಪರ್ಕ ಕ್ರಾಂತಿ. ರಾಜಕಾರಣದ ನಂಟಸ್ಥಿಕೆ ಇದ್ರೂ ರಾಜಕೀಯ ನೆರಳಿಂದ ದೂರವಿರುವ ಇಬ್ಬರಿಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವಂತೆ ಬಿಗ್ ಆಫರ್ ಹೋಗಿದೆ. ಒಂದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್, ಇನ್ನೊಬ್ಬ ರಾಜ್ಯದ ಜನರ ಹೃದಯ ಗೆದ್ದ ಡಾ. ಸಿ.ಎನ್.ಮಂಜುನಾಥ್
ಸ್ಪರ್ಧೆ ಬಗ್ಗೆ ಯದುವೀರ್ ಒಡೆಯರ್ ಒಲವು ಹೊಂದಿದ್ದಾರೆ. ಆದ್ರೆ ರಾಜಮಾತೆ ಪ್ರಮೋದಾದೇವಿ ಅಪ್ಪಣೆಗೆ ಕಾಯ್ತಿದ್ದಾರೆ. ರಾಜಕಾರಣ ಬೇಡ ಎಂಬ ಸಲಹೆ ಕೊಟ್ಟಿರುವ ಪ್ರಮೋದಾ ದೇವಿ ತಮ್ಮ ಪತಿ ಶ್ರೀಕಂಠದತ್ತರ ಸ್ವರ್ಗಸ್ಥರಾದ ಬಳಿಕ ರಾಜಕಾರಣದಿಂದ ರಾಜಮನೆತನ ದೂರವಿದೆ.
ಡಾ.ಸಿ.ಎನ್.ಮಂಜುನಾಥ್ರನ್ನೂ ಸಹ ಬಿಜೆಪಿ ಹೈಕಮಾಂಡ್ ಸಂಪರ್ಕಿಸಿದೆ. ಸ್ಪರ್ಧೆ ಬಗ್ಗೆ ಒಲವು ತೋರಿರುವ ಡಾ.ಸಿ.ಎನ್.ಮಂಜುನಾಥ್ಗೆ ಬೆಂಗಳೂರು ಗ್ರಾಮಂತರದಿಂದ ಸ್ಪರ್ಧೆ ಕಠಿಣ ಅಂತ ಆಪ್ತರು ಸಲಹೆ ನೀಡಿದ್ದಾರೆ. ಸ್ವತಃ ಮಾವ ದೇವೇಗೌಡರಿಂದಲೂ ಬೆಂಗಳೂರು ಗ್ರಾಮಾಂತರ ಬೇಡ ಅಂತ ಸೂಚಿಸಿದ್ದಾರೆ ಎನ್ನಲಾಗಿದೆ.. ಮೃದು ಸ್ವಭಾವದ ವ್ಯಕ್ತಿತ್ವದ ಡಾ.ಸಿ.ಎನ್.ಮಂಜುನಾಥ್ ಮೈಸೂರಿಂದಲೇ ಸ್ಪರ್ಧಿಸಲಿ ಅಂತ ಕುಟುಂಬದವರು ಸಲಹೆ ಕೊಟ್ಟಿದ್ದಾರೆ.
ಒಟ್ಟಾರೆ, 2014 ರಿಂದ ಎರಡು ಅವಧಿಗೆ ಸಂಸದರಾದ ಪ್ರತಾಪ್ ಸಿಂಹಗೆ ಈ ಸಲ ಟಿಕೆಟ್ ಸಿಗೋದು ಸಲೀಸಲ್ಲ ಅನ್ನೋ ಮಾತು ಕೇಳಿ ಬಂದಿದೆ.