ರಾಜಕೀಯ

ಪುತ್ರ ಕಾಂತೇಶನಿಗೆ ಹಾವೇರಿಯಲ್ಲಿ ಟಿಕೆಟ್ ಕೊಡಿಸಲು ಈಶ್ವರಪ್ಪ ಯತ್ನ

Views: 25

ಬೆಳಗಾವಿ,  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇನೆ. ಟಿಕೆಟ್ ಕೊಟ್ಟರೆ ಹಾವೇರಿಯಿಂದ ಸ್ಪರ್ಧಿಸುತ್ತಾನೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ತಮ್ಮ ಮಗ ಕಾಂತೇಶ್ ಗಾಗಿ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಹಿಂದ ಹಿಂದೆ ಬಿದ್ದಿದ್ದರು. ಆದರೆ ದಲಿತರು ಕೈಬಿಟ್ಟರು. ಈಗ ಉಳಿದವರು ಅಲ್ಪಸಂಖ್ಯಾತರ ಮಾತ್ರ ಅವರನ್ನೇ ಬಳಸಿಕೊಂಡು ರಾಜಕೀಯ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿಗಳು ಇದ್ದಾರೆ. ಅದರಂತೆ ದೇಶದ್ರೋಹಿಗಳಿಗೆ ತೃಪ್ತಿಯಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಮಮಂದಿರ ನಿರ್ಮಾಣವಾಗಬಾರದು ಈ ಹಿಂದೆ ಕೋರ್ಟ್‌ಗೆ ಹೋದವರು ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಪಾಕಿಸ್ತಾನದವರು ಸಹ ಮೋದಿಯವರಂತಹ ಪ್ರಧಾನಿ ನಮಗೆ ಇರಬೇಕಾಗಿತ್ತು ಎಂದು ಹೇಳುತ್ತಿದೆ. ಆದರೆ ಹಿಂದೂ ಮತ್ತು ಮುಸ್ಲಿಂ ಒಟ್ಟಾಗಿ ಸೇರಬಾರದು ಎಂಬ ಅಭಿಪ್ರಾಯ ಮುಖ್ಯಮಂತ್ರಿಯವರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಒಂದೊಂದು ಕಾಯ್ದೆಗಳನ್ನು ಅನುಷ್ಠಾಕ್ಕೆ ತಂದು ದೇಶದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಟೀಕಿಸಿದರು.

Related Articles

Back to top button