ಜನಮನ

ಪಿಂಚಣಿ ಉಪದಾನ ಪತ್ರಕ್ಕೆ 20 ಲಕ್ಷ ಲಂಚ ಕೇಳಿದ ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ

Views: 0

ಮಂಗಳೂರು: ವಯೋನಿವೃತ್ತಿ ಹೊಂದಲಿರುವ ಶಾಲಾ ಮುಖ್ಯ ಶಿಕ್ಷಕಿಗೆ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಲು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಅನುದಾನಿತ ಶಾಲೆಯ ಸಂಚಾಲಕಿ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಇಲ್ಲಿನ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮುಖ್ಯ ಶಿಕ್ಷಕಿ ಶೋಭಾರಾಣಿ ಎಂಬುವರು 42ವರ್ಷಗಳಿಂದ ಸೇವೆ ಸಲ್ಲಿಸಿ, ಜುಲೈ 31ರಂದು ವಯೋ ನಿವೃತ್ತಿ ಹೊಂದಲಿದ್ದಾರೆ. ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ಮೇ 25 ರಂದು ಶಾಲೆಯ ಸಂಚಾಲಕಿ ಜ್ಯೋತಿಯವರಿಗೆ ಮನವಿ ಪತ್ರದೊಂದಿಗೆ ವಿನಂತಿಸಿಕೊಂಡು ಸ್ವೀಕೃತಿ ನೀಡುವಂತೆ ಕೋರಿದ್ದರು.

ಶಾಲಾ ಸಂಚಾಲಕಿ ಪತ್ರಗಳಿಗೆ ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸದೆ ಸ್ವೀಕೃತಿ ಪತ್ರವನ್ನು ನೀಡದೆ ಶೋಭಾ ರಾಣಿಯವರಿಗೆ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಹಿ ಹಾಕಿ ಕಳುಹಿಸಬೇಕಾದರೆ 20 ಲಕ್ಷ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮತ್ತೆ ಸಂಚಾಲಕರ ಮನೆಗೆ ಜ್ಯೋತಿ ಅವರನ್ನು ಬೇಟಿ ನೀಡಿ ತನ್ನ ಪಿಂಚಣಿ ದಾಖಲೆಗಳಿಗೆ ಸಹಿ ಮಾಡಿ ಕೊಡುವಂತೆ ಕೋರಿದ್ದಾರೆ. ಆವಾಗ 5 ಲಕ್ಷ ಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಗುರುವಾರ ಶಾಲೆಯ ಸಂಚಾಲಕಿ ಶೋಬಾರಾಣಿ ಅವರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರು ಲೋಕಾಯುಕ್ತ ಎಸ್ ಪಿ    ಸಿ.ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪ ಅಧೀಕ್ಷಕರುಗಳಾದ ಕಲಾವತಿ, ಚೆಲುವರಾಜು, ಪೋಲಿಸ್ ನಿರೀಕ್ಷಕರಾದ ವಿನಾಯಕ ಬಿಲ್ಲವ ಇದ್ದಿದ್ದರು.

Related Articles

Back to top button