ಯುವಜನ

ಪಾಕ್ ಗುಪ್ತಚರ ಏಜೆಂಟ್ ಗಳೊಂದಿಗೆ ಸಂಪರ್ಕ ಫೇಮಸ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅರೆಸ್ಟ್..!

Views: 120

ಕನ್ನಡ ಕರಾವಳಿ ಸುದ್ದಿ: ಭಾರತದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದ ಆರೋಪದಡಿ ಫೇಮಸ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅರೆಸ್ಟ್ ಮಾಡಲಾಗಿದೆ.

ಪಾಕ್ ಗುಪ್ತಚರ ಏಜೆಂಟ್ ಗಳೊಂದಿಗೆ ಜ್ಯೋತಿಗೆ ಸಂಪರ್ಕ ಹೊಂದಿದ್ದಳಂತೆ. ಜೊತೆಗೆ ಈ ಹಿಂದೆ ಜ್ಯೋತಿ ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದಳಂತೆ. ಹೀಗಾಗಿ ಬೇಹುಗಾರಿಕೆ ಆರೋಪದಡಿ ಜ್ಯೋತಿ ಸೇರಿ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

ಜ್ಯೋತಿ ಮಲ್ಹೋತ್ರಾ ಹರಿಯಾಣ ಮೂಲದ ಯೂಟ್ಯೂಬರ್. ಈಕೆ ಒಬ್ಬ ಟ್ರಾವೆಲ್ ಬ್ಲಾಗರ್. ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿ ಮಲ್ಲೋತ್ರಾ ಕೂಡ ಒಬ್ಬರು. ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಅವರು 2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿನ ಪಾಕ್ ಹೈಕಮಿಷನ್ ಕಚೇರಿ ಸಿಬ್ಬಂದಿ ಜೊತೆ ಸ್ನೇಹ ಬೆಳೆಸಿ ರಹೀಮ್ ಅಲಿಯಾಸ್ ಡ್ಯಾನಿಶ್ ಎಂಬಾತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ಗೆ ಭಾರತದ ಸೂಕ್ಷ್ಮ ಮಾಹಿತಿ ರವಾನೆ ಮಾಡುತ್ತಿದ್ದಂತೆ. ಈ ಜ್ಯೋತಿ ಪಾಕ್ ಮಾಹಿತಿದಾರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳಂತೆ. ಸದ್ಯ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಗಳನ್ನು ನೀಡುತ್ತಿದ್ದ ಆರೋಪದಡಿಯಲ್ಲಿ ಜ್ಯೋತಿ ಮಲ್ಹೋತ್ರಾ ಸೇರಿದಂತೆ ಸೇರಿ ಒಟ್ಟು ಆರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ.

Related Articles

Back to top button