ಪರ್ಯಾಯ ಮಹೋತ್ಸವ ವಿಜೃಂಭಣೆಯಿಂದ ನೆರವೇರಲು ಸಹಕರಿಸಿದ ಪದ್ಮಶಾಲಿ ನೇಕಾರರ ಸಮುದಾಯಕ್ಕೆ ಪುತ್ತಿಗೆ ಶ್ರೀಗಳಿಂದ ಗೌರವ

Views: 331
ಉಡುಪಿ: ಪುತ್ತಿಗೆ ವಿಶ್ವಗೀತಾ ಪರ್ಯಾಯ ಮಹೋತ್ಸವವು ವಿಜೃಂಭಣೆಯಿಂದ ನೆರವೇರಲು ಅಪಾರವಾಗಿ ಸಹಕರಿಸಿದ ಪದ್ಮಶಾಲಿ / ಶೆಟ್ಟಿಗಾರ ಸಮಾಜವನ್ನು ಅತ್ಯಂತ ಪ್ರೀತಿಯಿಂದ ಆಹ್ವಾನಿಸಿ, 14-2-2024ನೇ ಬುಧವಾರ ಪ್ರತ್ಯೇಕ ವ್ಯವಸ್ಥೆಯಲ್ಲಿ ಭೋಜನ ಪ್ರಸಾದವನ್ನು ನೀಡಿ, ಪ್ರತಿಯೊಬ್ಬರಿಗೂ ತಮ್ಮ ದಿವ್ಯ ಹಸ್ತದಿಂದ ಶಾಲು ಹೊದಿಸಿ, ಅನುಗ್ರಹ ಸಂದೇಶ ಮತ್ತು ಮಂತ್ರಾಕ್ಷತೆ ನೀಡಿ ಪೂಜ್ಯ ಪುತ್ತಿಗೆ ಶ್ರೀಪಾದರು ಆಶೀರ್ವದಿಸಿದರು.
ನಂತರ ಶ್ರೀಗಳು ಸಮಾಜದ ಕೊಡುಗೆಯನ್ನು ಪ್ರಶಂಸಿಸಿ, ಪರ್ಯಾಯದ ಎರಡು ವರ್ಷದುದ್ದಕ್ಕೂ ನಿರಂತರವಾಗಿ ಮಠಕ್ಕೆ ಬಂದು, ಸಂಪರ್ಕದಲ್ಲಿ ಇದ್ದು, ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಅಪೇಕ್ಷಿಸಿದರು.
ಸುಮಾರು 250 ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಬಂದು ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಾರ್ಥರಾದ ಸಮಾಜದ ಪ್ರತಿಯೊಬ್ಬರಿಗೂ ಹೃದಯಾಂತರಾಳದ ಕೃತಜ್ಞತೆಗಳನ್ನು ಅರ್ಪಿಸಿದರು.
ಪುತ್ತಿಗೆ ಮಠದಿಂದ ಪದ್ಮಶಾಲಿ ನೇಕಾರ ಸಮುದಾಯಕ್ಕೆ ನೀಡಿದ ಕೃತಜ್ಞತಾ ಸಂದೇಶ ಹೀಗಿದೆ..
“ಶ್ರೀ ಪುತ್ತಿಗೆ ಮಠದ ಪರ್ಯಾಯದ ಸಂದರ್ಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪದ್ಮಶಾಲಿ ಸಮಾಜದ ಮತ್ತು ನೇಕಾರರ ಸಹಕಾರ ಸಂಘದ ಸದಸ್ಯರೆಲ್ಲರೂ ಸೇರಿಕೊಂಡು ಪುತ್ತಿಗೆ ಪರ್ಯಾಯವನ್ನು ಬಹಳ ವಿಜೃಂಭಣೆಯಿಂದ ನಡೆಸುವರೇ ಸಹಕಾರವನ್ನು ನೀಡಿರುತ್ತೀರಿ. ಶ್ರೀ ಪುತ್ತಿಗೆ ಪರ್ಯಾಯವು ಬಹಳ ವಿಜೃಂಭಣೆಯಿಂದ ನಡೆದಿದೆ ಎಂಬುದನ್ನು ತಿಳಿಸಲು ಹರ್ಷ ಪಡುತ್ತೇವೆ. ಈ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ಮಡ ಜಿಲ್ಲೆಯ ಪದ್ಮಶಾಲಿ ಸಮಾಜ ಮತ್ತು ನೇಕಾರರ ಸಹಕಾರ ಸಂಘದಿಂದ ಪುತ್ತಿಗೆ ಪರ್ಯಾಯಕ್ಕೆ ಸಹಕರಿಸಿದ ಸದಸ್ಯರುಗಳು ಹಾಗೂ ಗಣ್ಯರೆಲ್ಲರೂ ತಾ. 14-2-2024ನೇ ಬುಧವಾರ ಮಧ್ಯಾಹ್ನ 1:00 ಗಂಟೆಗೆ ಶ್ರೀ ಕೃಷ್ಣ ಮಠಕ್ಕೆ ಬಂದು ಭೋಜನ ಪ್ರಸಾದವನ್ನು ಸ್ವೀಕರಿಸಿ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು ಕೃತಾರ್ಥರಾಗಬೇಕಾಗಿ ಮಠದ ವತಿಯಿಂದ ವಿನಂತಿಸುತ್ತೇವೆ. ಭೋಜನ ಪ್ರಸಾದದ ವ್ಯವಸ್ಥೆಯನ್ನು ಶ್ರೀ ಕೃಷ್ಣ ಮಠದ ಅನ್ನ ಬ್ರಹ್ಮ ಭವನದಲ್ಲಿ ಏರ್ಪಡಿಸಲಾಗುತ್ತದೆ ಎಂದು ಸಮಾಜಕ್ಕೆ ಸಂದೇಶದ ಮೂಲಕ ಆಹ್ವಾನ ನೀಡಿದ್ದರು”.