ಜನಮನ

ಪರಸ್ಪರ ಒಟ್ಟಿಗೆ ದಯಾಮರಣ ಪಡೆದ ನೆದರ್‌ಲ್ಯಾಂಡ್‌ ಮಾಜಿ ಪ್ರಧಾನಿ, ಪತ್ನಿ

Views: 51

ನೆದರ್‌ಲೆಂಡ್‌ ಮಾಜಿ ಪ್ರಧಾನಿ ಡ್ರಿಯೆಸ್‌ ವಾನ್‌ ಅಗ್ಟ್ ಹಾಗೂ ಅವರ ಪತ್ನಿ‌ ಯುಜೀನ್‌ ಕ್ರೆಕಲ್‌ಬರ್ಗ್‌ ಒಟ್ಟಾಗಿ ದಯಾಮರಣ ಪಡೆದಿದ್ದಾರೆ. ಫೆಬ್ರವರಿ 5ರಂದು ಡುವೊ-ಯೂಥಾನೇಸಿಯಾ ಪ್ರಕ್ತಿಯೆ ಮೂಲಕ, ದಂಪತಿ ಲೀಗಲ್ಲಾಗಿ ದಯಾಮರಣ ಪಡೆದಿದ್ದಾರೆ. ಇಬ್ಬರಿಗೂ 93 ವರ್ಷ ವಯಸ್ಸಾಗಿತ್ತು. ಕುಟುಂಬಸ್ಥರ ಒಪ್ಪಿಗೆ ಪಡೆದು, ಒಬ್ಬರ ಕೈಯನ್ನು ಒಬ್ರು ಹಿಡಿದು, ದಯಾಮರಣ ಪಡೆದಿದ್ದಾರೆ. ಅಂದ್ಹಾಗೆ ಯೂಥಾನೇಸಿಯಾ ಅಥ್ವಾ ದಯಾಮರಣ ಅಮೆರಿಕ, ನೆದರ್ಲೆಂಡ್‌, ಆಸ್ಟ್ರೇಲಿಯಾ, ಜಪಾನ್‌ ಹಾಗೂ ಸೌತ್‌ಕೊರಿಯಾದಲ್ಲಿ ಲೀಗಲ್ಲಾಗಿದೆ. ಇಂಡಿಯಾದಲ್ಲಿ ಪ್ಯಾಸಿವ್‌ ಯೂಥಾನೇಸಿಯಾ ಅಂದ್ರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್‌, ಆಹಾರದ ಟ್ಯೂಬ್‌ ಅಥ್ವಾ ಲೈಫ್‌ ಸಪೋರ್ಟ್‌ ಮಷಿನ್‌ಗಳನ್ನು ಬಂದ್‌ ಮಾಡೋ ಮೂಲಕ ಪ್ಯಾಸಿವ್‌ ಯೂಥಾನೇಸಿಯಾ ಪ್ರಕ್ತಿಯೆ ಮಾಡಲಾಗತ್ತೆ

ದಯಾಮರಣ ಆಯ್ದುಕೊಂಡಿದ್ದು ಯಾಕೆ?

ಡ್ರೈಸ್‌-ಯೂಜೆನಿ ದಂಪತಿಗೆ 93 ವರ್ಷ. ಪತ್ನಿಯನ್ನು ಡ್ರೈಸ್‌ ಸದಾ ನನ್ನ ಹುಡುಗಿ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಿದ್ದರು. 2019ರಲ್ಲಿ ಡ್ರೈಸ್‌ಗೆ ಬ್ರೈನ್‌ ಹ್ಯಾಮರೇಜ್‌ ಆಯ್ತು. ಅಲ್ಲಿಂದ ಅವರ ಶಾರೀರಿಕ ಸ್ವಾಧೀನ ತಪ್ಪಿತು. ಪೂರ್ಣ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾದ ಸ್ಥಿತಿ. ಇನ್ನು 93 ವರ್ಷದ ಪತ್ನಿ ಯೂಜೆನಿಯೂ ದುರ್ಬಲರಾಗಿದ್ದರು. ಈ ನೋವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನಿಸಿದಾಗ ಪರಸ್ಪರ ಒಟ್ಟಿಗೆ ದೇಹಬಿಡಲು ನಿರ್ಧರಿಸಿದರು..

Related Articles

Back to top button