ಪತ್ನಿ,ಮಗುವನ್ನು ಕತ್ತು ಹಿಸುಕಿ ಕೊಂದು ತಾನು ಆತ್ಮಹತ್ಯೆಗೆ ಶರಣು

Views: 52
ಕನ್ನಡ ಕರಾವಳಿ ಸುದ್ದಿ: ಪತ್ನಿ ಹಾಗೂ ಮಗುವನ್ನು ಕತ್ತು ಹಿಸುಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶ ಬಂದಾ ಜಿಲ್ಲೆಯಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದೆ.
ಕೆಲದಿನಗಳಿಂದ ಬಾಗಿಲು ಬಂದ್ ಮಾಡಿದ್ದ ಮನೆಯೊಂದರಲ್ಲಿ ಕೆಟ್ಟವಾಸನೆ ಬರುತ್ತಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಗಂಡ, ಹೆಂಡತಿ ಹಾಗೂ 2 ತಿಂಗಳ ಮಗುವಿನ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಜಿತೇಂದ್ರ, ಪತ್ನಿ ಗೌರ ಹಾಗೂ 2 ತಿಂಗಳ ಮಗು ಎಂದು ಗುರುತಿಸಲಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ಪತಿ ಮೊದಲು ತನ್ನ ಪತ್ನಿ ಗೌರ ಮತ್ತು ಮಗುವಿನ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಿತೇಂದ್ರ ಅವರು ಮದುವೆಯಾದಾಗಿನಿಂದ, ಪತಿ ಮತ್ತು ಪತ್ನಿಯ ನಡುವೆ ವರದಕ್ಷಿಣೆ ವಿಷಯದಲ್ಲಿ ಜಗಳ ನಡೆಯುತ್ತಿತ್ತು. ಅಲ್ಲದೆ, ತನ್ನ ಅತ್ತೆ ಮಾವನಿಂದ ಕೂಡ ನೋವು ಅನುಭವಿಸುತ್ತಿದ್ದ. ದಿನೇದಿನೇ ಸಮಸ್ಯೆ ದೊಡ್ಡದಾಗುತ್ತಾ ಸಾಗುತ್ತಿತ್ತು ವಿನಾ ಶಮನವಾಗಿರಲಿಲ್ಲ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಮಾನಸಿಕ ಸ್ಥಿತಿ ಮತ್ತು ಕೌಟುಂಬಿಕ ಉದ್ವಿಗ್ನತೆಗಳನ್ನು ಸಂದೇಶಗಳ ಮೂಲಕವಿವರಿಸಿದ್ದಾನೆ ಎಂದು ತಿಳಿಸಿದ್ದಾರೆ.