ಪಂಚಮಿತ್ರ Whatsapp Chat ಲೋಕಾರ್ಪಣೆ, ಗ್ರಾಮ ಪಂಚಾಯಿತಿ ಸೇವೆ ಪಡೆಯುವುದು ಹೇಗೆ?

Views: 39
ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಪಂಚಮಿತ್ರ Whatsapp Chatಅನ್ನು ಲೋಕಾರ್ಪಣೆ ಮಾಡಿದೆ. ಗ್ರಾಮ ಪಂಚಾಯಿತಿ ಸೇವೆಗಳು ಈಗ ವಾಟ್ಸಪ್‌ನಲ್ಲಿ ಲಭ್ಯವಿದೆ
ಕರ್ನಾಟಕದ ಗ್ರಾಮ ಪಂಚಾಯಿತಿಗಳಲ್ಲಿ ಸಿಗುವ ಅನೇಕ ಸೇವೆಗಳು ಈಗ ವಾಟ್ಸಪ್‌ನಲ್ಲಿಯೇ ಲಭ್ಯವಿದೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ದೇಶದಲ್ಲಿಯೇ ಮೊದಲ ಬಾರಿಗೆ ಪಂಚಮಿತ್ರ Whatsapp Chat ಅನ್ನು ಲೋಕಾರ್ಪಣೆ ಮಾಡಲಾಗಿದೆ.
ಗ್ರಾಮೀಣ ಭಾಗದ ಜನರಿಗೆ ಸುಲಲಿತ ಜನಸೇವೆ ನೀಡುವ ಉದ್ದೇಶದಿಂದ ಪಂಚಮಿತ್ರ Whatsapp Chat ಪ್ರಾರಂಭಿಸಲಾಗಿದೆ. ರಾಜ್ಯದ ಗ್ರಾಮೀಣ ಭಾಗದ ಜನರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸಂಬಂಧಪಟ್ಟ ಮಾಹಿತಿ ವಿವರಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು.
ಜನರು ಮಾಹಿತಿ ಪಡೆಯುವುದು ಮಾತ್ರವಲ್ಲ ಕುಂದು-ಕೊರತೆಗಳನ್ನು ದಾಖಲಿಸಲು, ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯನ್ನು ವಾಟ್ಸಾಪ್ ಚಾಟ್ ಮೂಲಕ ತಿಳಿದುಕೊಳ್ಳಬಹುದು. ಇದರಿಂದಾಗಿ ಸಮಯ ಮತ್ತು ಹಣ ಉಳಿತಾಯವಾಗಲಿದೆ.
Whatsapp Chat ಮೂಲಕ ಸೇವೆ ಪಡೆಯಲು ನಂಬರ್ 8277506000. ಗ್ರಾಮ ಪಂಚಾಯತಿ ಸೇವೆಗಳಿಗೆ ಸಂಬಂಧಪಟ್ಟ ಮಾಹಿತಿ ಪಡೆದು, ಕುಂದುಕೊರತೆಗಳನ್ನು ದಾಖಲಿಸಬಹುದಾಗಿದೆ. ಇದರಲ್ಲಿ ಭಾಷೆ, ಹೆಸರು, ಮೊಬೈಲ್ ನಂಬರ್ ಕೊಟ್ಟು ನೋಂದಣಿ ಮಾಡಿ ಚಾಟ್ ಪ್ರಾರಂಭಿಸಬಹುದಾಗಿದೆ
ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಈ ವ್ಯವಸ್ಥೆ ಮಾಡಲಾಗಿದೆ. ಸುಮಾರು 78 ಸೇವೆಗಳು ಇದರ ಅಡಿಯಲ್ಲಿ ಅಭ್ಯವಿದೆ. ನೇರವಾಗಿ ಜನರಿ ಬಳಿಗೆ ಸರ್ಕಾರವನ್ನು ತಲುಪಿಸುವ ನಿಟ್ಟಿನಲ್ಲಿ ಈ ವಾಟ್ಸಾಪ್ ಚಾಟ್ ಸೇವೆಯು ಸಹಾಯಕವಾಗಿದೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬೀದಿಬೀಪ, ಕುಡಿಯುವ ನೀರು, ರಸ್ತೆ, ತ್ಯಾಜ್ಯ ನಿರ್ವಹಣೆ ಕುರಿತು ದೂರು ನೀಡಬಹುದು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳನ್ನು ಸಂಪರ್ಕಿಸುವ ವಿವರಗಳು ಸಹ ಇಲ್ಲಿ ಲಭ್ಯವಿದೆ. ಗ್ರಾಮ ಪಂಚಾಯಿತಿ ಸಭೆಯ ನಡಾವಳಿ, ಆರ್‌ಟಿಐ ದಾಖಲೆಗಳನ್ನು ಸಹ ಈ ಚಾಟ್ ಮೂಲಕ ಮೊಬೈಲ್‌ನಲ್ಲಿ ಪಡೆಯಬಹುದಾಗಿದೆ.