ನಿವೇದಿತಾ ಗೌಡ ಹೊಸ ಅವತಾರ… ಹೈಕ್ಳ ಬಾಯಿಗೆ ಆಹಾರ..!

Views: 128
ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ.
ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ. ಹೌದು, ರೀಲ್ಸ್ ಮಾಡುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೇದಿತಾ ಗೌಡ, ಸದ್ಯಕ್ಕೆ ಹೊಸದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕೆಂಪುಡುಗೆಯಲ್ಲಿ Dont Go Insane ಎನ್ನುವ ಇಂಗ್ಲಿಷ್ ಹಾಡಿಗೆ, ಸೊಂಟ ಬಳುಕಿಸಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರ ಈ ವಿಡಿಯೋ ಅನೇಕರ ಕಣ್ಮನವನ್ನು ಸೆಳೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನಿವೇದಿತಾ ಗೌಡ ಅವರ ಈ ಹಾಟ್ ಅವತಾರವನ್ನು ಒಬ್ಬರಲ್ಲ, ಇಬ್ಬರಲ್ಲ ಹೆಚ್ಚು ಕಡಿಮೆ ಹದಿನಾರೂವರೆ ಲಕ್ಷಕ್ಕೂ ಅಧಿಕ ಜನ ಕಣ್ತುಂಬಿಕೊಂಡಿದ್ದಾರೆ. ಬಾರ್ಬಿ ಡಾಲ್ ನಿವೇದಿತಾ ಅವರ ಬೆನ್ನು ಹತ್ತಿದ್ದಾರೆ.
ಕೆಲವರ ಕಣ್ಣಿಗೆ ನಿವಿಯ ಈ ಥಳಕು ಬಳಕು ಕಾಮಪ್ರಚೋದಕದಂತೆ ಕಂಡರೆ, ಕೆಲವರಿಗೆ ಪಕ್ಕದ ಆಂಧ್ರದ ನಟಿಯರು ನೆನಪಾಗ್ತಿದ್ದಾರೆ. ಇನ್ನೂ ಬಹುತೇಕರಿಗೆ ನಿವೇದಿತಾ ಗೌಡ ಹಾಕಿಕೊಂಡಿರುವ ಡ್ರೆಸ್ ಬಗ್ಗೆ ಚಿಂತೆ ಕಾಡ್ತಿದ್ದರೆ, ಉಳಿದವರ ಕಣ್ಮುಂದೆ ಚಂದನ್ ಶೆಟ್ಟಿ ಕಥೆ-ವ್ಯಥೆ ಪ್ರಸಾರವಾಗ್ತಿದೆ. ಥರೇವಾರಿ ಅಭಿಪ್ರಾಯಗಳಿಂದ ನಿವೇದಿತಾ ಅವರ ಕಮೆಂಟ್ ಸೆಕ್ಷನ್ ತುಂಬಿ ತುಳುಕುತ್ತಿದೆ.
ಒಟ್ಟಿನಲ್ಲಿ ಸದ್ಯಕ್ಕೆ ನಿವೇದಿತಾ ಗೌಡ, ಮತ್ತೊಮ್ಮೆ-ಮಗದೊಮ್ಮೆ ಟ್ರೋಲ್ ಹೈಕ್ಳ ಬಾಯಿಗೆ ಆಹಾರವಾಗಿದ್ದಾರೆ.