ರಾಜಕೀಯ
ನಾವು ನೀಡಿದ ಎಲ್ಲಾ ಭರವಸೆಗಳಿಗೆ ನಾನೇ ಗ್ಯಾರಂಟಿ ಎಂದ ಮಲ್ಲಿಕಾರ್ಜುನ ಖಗೆ೯

Views: 0
ನಗರದ ಖಾಸಗಿ ಹೊಟೆಲ್ ನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಗೆ೯ ಅವರು, ನಾವು ನೀಡಿದ ಎಲ್ಲಾ ಭರವಸೆಗಳ ಈಡೇರಿಕೆ ಮತ್ತು ಆಧ್ಯತೆಯಾಗಿದ್ದು, ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿಗಳನ್ನು ಮಂಜೂರು ಮಾಡುವಂತೆ ಹೇಳುತ್ತೇನೆ ಇದು ನನ್ನ ಗ್ಯಾರಂಟಿ ಎಂದರು.
ಈ ಹಿಂದೆ ನಾವು ಅಧಿಕಾರಕ್ಕೆ ಬಂದಾಗ 165 ಭರವಸೆಗಳನ್ನು ನೀಡಿದ್ದೇವೆ. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ನೀಡಿದ ಗ್ಯಾರಂಟಿ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದ್ದು, ಆದರೇ, ಇನ್ನಷ್ಟು ಪ್ರಚಾರದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾಯ೯ಕತ೯ರು ಈ ನಿಟ್ಟಿನಲ್ಲಿ ಇನ್ನಷ್ಟು ಕಾಯ೯ ಪ್ರವ್ರತ್ತರಾಗಬೇಕೆಂದು ಎಂದು ಹೇಳಿದರು.