ಇತರೆ

ನಾಳೆ ರೇಣುಕಾಸ್ವಾಮಿ ನಿವಾಸದಲ್ಲೇ ಮಗನ ನಾಮಕರಣ..ಯಾವ ಹೆಸರಿಡಬಹುದು?

Views: 90

ಕನ್ನಡ ಕರಾವಳಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಅಟ್ಟಹಾಸಕ್ಕೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ.ಇದೀಗ ಮೃತ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ ಅಂದ್ರೆ ಭಾನುವಾರ ಮೃತ ರೇಣುಕಾಸ್ವಾಮಿ ಮಗನ ನಾಮಕರಣ ಸಮಾರಂಭ ವಿಜ್ರಂಭಣೆಯಿಂದ ನಡೆಯಲಿದೆ.

ನಟ ದರ್ಶನ್ & ಗ್ಯಾಂಗ್ ಕೈಗೆ ಸಿಲುಕಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವವಾಗಿ ಪತ್ತೆಯಾಗಿದ್ದರು. ಆಗ ರೇಣುಕಾಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ರೇಣುಕಾಸ್ವಾಮಿ ಮೃತಪಟ್ಟ ಬಳಿಕ ಕಳೆದ ಅಕ್ಟೋಬರ್ 16 ಬೆಳಗಿನ ಜಾವ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದೀಗ ರೇಣುಕಾಸ್ವಾಮಿ ಹಾಗೂ ಸಹನಾ ದಂಪತಿ ಮಗುವಿಗೆ 5 ತಿಂಗಳು ತುಂಬಿದೆ. ಹೀಗಾಗಿ ಕುಟುಂಬಸ್ಥರು ನಾಳೆ ನಾಮಕರಣ ಶಾಸ್ತ್ರವನ್ನು ಇಟ್ಟುಕೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸದಲ್ಲೇ ಅವರ ಮಗವಿಗೆ ನಾಮಕರಣ ಶಾಸ್ತ್ರ ನಡೆಯಲಿದೆ. ಹೀಗಾಗಿ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರೇಣುಕಾಸ್ವಾಮಿ ಮಗನಿಗೆ ಕುಟುಂಬಸ್ಥರು ಯಾವ ಹೆಸರನ್ನು ಇಡಲಿದ್ದಾರೆ ಅನ್ನೋದು ಕುತೂಹಲ ಕೆರಳಿಸಿದೆ.

 

Related Articles

Back to top button