ಜನಮನ

ನಾಳೆಯಿಂದ ಹಾಲು, ಮೊಸರು, ವಿದ್ಯುತ್ ದರ ದುಬಾರಿ, ವಾಹನ ಸವಾರರಿಗೂ ಶಾಕ್!

Views: 134

ಕನ್ನಡ ಕರಾವಳಿ ಸುದ್ದಿ: ನಾಳೆಯಿಂದ ರಾಜ್ಯದ ಜನತೆಗೆ ದರ ಏರಿಕೆ ಬಿಸಿ ತಟ್ಟಲಿದೆ. ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ. ಜೊತೆಗೆ ವಾಹನ ಸವಾರರಿಗೂ ಶಾಕ್ ನೀಡಲಿದೆ.

ಈಗಾಗಲೇ ಬಸ್ ಹಾಗೂ ಮೆಟ್ರೋ ದರ ದುಬಾರಿಯಾಗಿರುವ ಬೆನ್ನಲ್ಲೇ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಇಂಧನ ಇಲಾಖೆ ನೌಕರರ ಪಿಂಚಣಿ ಮತ್ತು ಗ್ರಾಜ್ಯೂಟಿ ನೀಡಲು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದೆ. ಮತ್ತೊಂದೆಡೆ ರೈತರಿಗೆ ಪ್ರೋತ್ಸಾಹ ಧನ ನೀಡಲು ನಂದಿನಿ ಹಾಲಿನ ಮೊಸರಿನ ಪ್ರತಿ ಲೀಟರ್ ದರವನ್ನು 4 ರೂ.ಗೆ ಸರ್ಕಾರ ಹೆಚ್ಚಿಸಿದೆ.

ನಾಳೆಯಿಂದಲೇ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ. ಹಾಲು ದರ ಹೆಚ್ಚಳವಾಗಿರುವುದರಿಂದ ಹೋಟೆಲ್ ಗಳಲ್ಲಿ ಕಾಫಿ, ಟೀ ದರವೂ ಗಗನಕ್ಕೇರಲಿದೆ.

ವಿದ್ಯುತ್ ದರ 31 ಪೈಸೆ ಹೆಚ್ಚಳ ಮಾಡಿರುವುದರಿಂದ ಮಾಸಿಕ ಶುಲ್ಕ 20 ರೂ. ಹೆಚ್ಚಳವಾಗಲಿದ್ದು, ಇದರಿಂದಾಗಿ 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಹೆಚ್ಚಳವಾಗಲಿದೆ.

ವಾಹನ ಸವಾರರಿಗೆ ಶಾಕ್!

ಹೊಸವಾಹನ ಖರೀದಿಸಬೇಕು ಎಂದು ಕನಸು ಕಾಣುತ್ತಿರುವ ಗ್ರಾಹಕರಿಗೆ ಶಾಕ್ ನೀಡಿದೆ. ಉಕ್ಕು ಬಿಡಿ ಭಾಗ ದುಬಾರಿ ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ನಾಳೆಯಿಂದಲೇ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರಿದೆ.

Related Articles

Back to top button