ಇತರೆ
ನಾಪತ್ತೆಯಾದ ಇಬ್ಬರು ಮಕ್ಕಳ ತಾಯಿ, ನಾಲ್ಕು ಮಕ್ಕಳ ತಂದೆಯ ಜೊತೆ ನೋಂದಣಿ ವಿವಾಹಕ್ಕೆ ಸಿದ್ಧತೆ?

Views: 74
ವಿಟ್ಲ: ವಿಟ್ಲಪಟ್ನೂರು ಗ್ರಾಮದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಐದು ದಿನಗಳ ಹಿಂದೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ನೊಂದಣಿ ಕಚೇರಿಯಲ್ಲಿ ವಿವಾಹಕ್ಕೆ ಸಿದ್ಧತೆಯಾಗಿದೆ ಎಂದು ತಿಳಿದುಬಂದಿದೆ
ಪರ್ತಿಪ್ಪಾಡಿ ಗ್ರಾಮ ಚಾವಡಿ ನಿವಾಸಿ ಇಬ್ಬರು ಮಕ್ಕಳ ತಾಯಿ, ಸಜಿಪ ಮೂಲದ ನಾಲ್ಕು ಮಕ್ಕಳ ತಂದೆಯ ಜತೆಗೆ ಪಲಾಯನ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಮಹಿಳೆಯ ಪತಿ ನಿಧನ ಹೊಂದಿದ್ದು,ಆಕೆ ನಾಪತ್ತೆಯಾಗುತ್ತಿದ್ದಂತೆ ಪುತ್ರ ಠಾಣೆಗೆ ದೂರು ನೀಡಿದ್ದರು. ವಶೀಕರಣ ಮಾಡಿ ಆಕೆಯನ್ನು ಬಲೆಗೆ ಬೀಳಿಸಲಾಗಿದೆ ಎಂಬ ಆರೋಪದ ನಡುವೆಯೂ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ.