ಇತರೆ
ನಾಪತ್ತೆಯಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಶವ ನೇತ್ರಾವತಿ ಹೊಳೆಯಲ್ಲಿ ಪತ್ತೆ

Views: 0
ಸೋಮವಾರ ಸಂಜೆ ನಾಪತ್ತೆಯಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಮೃತ ದೇಹ ಉಳ್ಳಾಲ ತೊಕ್ಕಟ್ಟು ಬಳಿ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದೆ.
ಮೇಸ್ತ್ರಿ ಕೆಲಸ ಮಾಡುತ್ತಿರುವ ಲೋಕೇಶ್( 26) ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರು ಯುವಶಕ್ತಿ ಸೇವಾ ಪಥದ ಮೂಲಕ ನೊಂದರಿಗೆ ಸಹಾಯ ಹಸ್ತರಾಗಿದ್ದಾರೆ. ಅಲ್ಲದೆ ಅವರು ಬಿಜೆಪಿ ಮಂಡಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸೋಮವಾರ ಮನೆಯಿಂದ ಬೈಕಿನಲ್ಲಿ ತೆರಳಿದ್ದರು. ಮರಳಿ ಮನೆಗೆ ಬಾರದನ್ನು ಕಂಡು ಮನೆಯವರು ಹಾಗೂ ಗೆಳೆಯರು ಅವರ ಮೊಬೈಲಿಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಆಗಿತ್ತು ಕೂಡಲೇ ಕುಂಬಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ನದಿ ತೀರದಲ್ಲಿ ಪತ್ತೆಯಾದ ಮೃತ ದೇಹವನ್ನು ಮನೆಯವರು ಗುರುತು ಪತ್ತೆ ಹಚ್ಚಿದರು.