ಸಾಂಸ್ಕೃತಿಕ
ನಟ ದರ್ಶನ್ ಗನ್ ಸೀಜ್ ಮಾಡಿದ ಪೊಲೀಸರು

Views: 54
ಕನ್ನಡ ಕರಾವಳಿ ಸುದ್ದಿ: ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರ ಬಂದಿರೋ ನಟ ದರ್ಶನ್ ಗೆ ಮತ್ತೊಂದು ಆಘಾತ ಎದುರಾಗಿದೆ ಕಮಿಷನರ್ ದಯಾನಂದ್ ಆದೇಶದ ಬೆನ್ನಲ್ಲೇ ದರ್ಶನ್ ಗನ್ ಸೀಜ್ ಆಗಿದೆ.
ಪೊಲೀಸರು ದರ್ಶನ್ ಮನೆಗೆ ತೆರಳಿ ಗನ್ ಸೀಜ್ ಮಾಡಿದ್ದಾರೆ. ಚೆನ್ನಮ್ಮನಕೆರೆಯ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿದ್ದ ದರ್ಶನ್ ಗನ್ ಸೀಜ್ ಆಗಿದೆ
ಮೊದಲು ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿತ್ತು. ಪರವಾನಗಿ ರದ್ದು ಮಾಡಿದ್ದ ಬೆನ್ನಲ್ಲೆ ದರ್ಶನ್‌ಗೆ ರಾಜರಾಜೇಶ್ವರಿ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದರು. ನೋಟಿಸ್ ಜಾರಿ ಮಾಡಿದ್ರೂ ಗನ್ ಪೊಲೀಸರಿಗೆ ನೀಡಲು ನಟ ದರ್ಶನ್ ಹಿಂದೇಟು ಹಾಕಿದ್ದರು.
ನಟ ದರ್ಶನ್ ಜರ್ಮನ್ ಮೇಡ್ ಗನ್ ಬಳಸುತ್ತಿದ್ದರು. ಕಾರ್ಲ್ ವಾಲ್ತೇರ್ ವಾಫೆನ್ ಫ್ಯಾಬ್ರಿಕ್ ಕಂಪನಿ ಗನ್ ಇದಾಗಿದ್ದು, ಜತೆಗೆ 5 ಸಜೀವ ಗುಂಡುಗಳು ಸೀಜ್ ಮಾಡಿದ್ದಾರೆ.