ಧಾರ್ಮಿಕ

ದೇವಾಲಯಗಳ ಆಡಳಿತ ನಡೆಸಲು ಇನ್ಮುಂದೆ ಮುಂಬೈ ವಿವಿ ಯಿಂದ ‘ಟೆಂಪಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಕೋರ್ಸ್​..!

Views: 36

ದೇಶದಲ್ಲಿರುವ ದೊಡ್ಡ ದೊಡ್ಡ ದೇವಾಲಯಗಳ ನಿರ್ವಹಣೆ ಮಾಡುವ ಉದ್ದೇಶದಿಂದ ಟೆಂಪಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಕೋರ್ಸ್​ ಆರಂಭಿಸಲು ಮುಂಬೈ ವಿಶ್ವವಿದ್ಯಾಲಯ ನಿರ್ಧರಿಸಿದೆ ಎನ್ನಲಾಗಿದೆ.

ಆಕ್ಸ್​​ಫರ್ಡ್​ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ಸಹಯೋಗದಲ್ಲಿ ಮುಂಬೈ ವಿವಿ ನೂತನ ಡಿಪ್ಲೊಮಾ ಕೋರ್ಸ್​​​ಗೆ ಮುಂದಾಗಿದೆ. ಈ ಸಂಬಂಧ ಒಪ್ಪಂದ ಕೂಡ ಏರ್ಪಟ್ಟಿದೆ ಎಂದು ತಿಳಿದುಬಂದಿದೆ. ಆನ್​ಲೈನ್ ಹಾಗೂ ಆಫ್​ಲೈನ್ ಮೂಲಕವೂ ಕೋರ್ಸ್​ ತರಬೇತಿ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಸದ್ಯ ಡಿಪ್ಲೋಮಾ ಮಾಡುವ ನಿರ್ಧಾರದಲ್ಲಿರುವ ವಿವಿಯು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೆ ಅದೇ ವಿಷಯದ ಮೇಲೆ ಸ್ನಾತಕೋತ್ತರ ಪದವಿಯನ್ನೂ ಆರಂಭಿಸುವ ಚಿಂತನೆಯಲ್ಲಿ ವಿವಿ ಇದೆ. ಈ ಮೂಲಕ ವಿದ್ಯಾರ್ಥಿಗಳು ಹಿಂದೂ ತತ್ವಶಾಸ್ತ್ರ ಓದಲು ಸಾಧ್ಯವಾಗುತ್ತದೆ. ಜೊತೆಗೆ ದೇವಾಲಗಳ ನಿರ್ವಹಣೆ ಬಗ್ಗೆ ಆಳವಾದ ತಿಳುವಳಿಕೆ ಸಿಗಲಿದೆ ಅನ್ನೋದು ತಜ್ಞರ ಲೆಕ್ಕಾಚಾರವಾಗಿದೆ.

ಮುಂಬೈ ವಿಶ್ವವಿದ್ಯಾಲಯವು ಆಕ್ಸ್​ಫರ್ಡ್​​ ಕೇಂದ್ರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಕಾರಣ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ಆಕ್ಸ್​ಫರ್ಡ್​ ಹಿಂದೂ ಅಧ್ಯಯನ ಕೇಂದ್ರ ನಡೆಸುತ್ತದೆ. ಮುಂಬೈ ವಿಶ್ವವಿದ್ಯಾಲಯವು ಕಾಲೇಜು, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ವಿಶ್ವದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. 711 ಸಂಯೋಜಿತ ಕಾಲೇಜುಗಳನ್ನು ಇದು ಹೊಂದಿದೆ

Related Articles

Back to top button