ತೆಂಗಿನ ಮರವೇರಿ ಕಾಯಿ ತೆಗೆಯುವ ಕೂಲಿ ಕಾರ್ಮಿಕ ವಿಠಲ ಶೆಟ್ಟಿಗಾರ್ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಗೆ ಆಯ್ಕೆ

Views: 333
ಉಡುಪಿ :ಗುರುಗಳಿಲ್ಲದೆ ನಿರಂತರ ಕಠಿಣ ಸ್ವ ಅಭ್ಯಾಸದಿಂದ ಕೂಲಿ ಮಾಡಿಕೊಂಡು ಕ್ರೀಡೆಯಲ್ಲಿ ಉತ್ತುಂಗಕ್ಕೆ ಬೆಳೆದ ಸಾಸ್ತಾನ ಗುಂಡ್ಮಿಯ ವಿಠಲ ಶೆಟ್ಟಿಗಾರ್ ಫೆಬ್ರವರಿ 18 ರಿಂದ 28ರ ವರೆಗೆ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
15 ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಗೆದ್ದವರು ನಂತರ ಕ್ರೀಡಾ ಕ್ಷೇತ್ರದಿಂದ ಹಿಂದಿರುಗಿ ನೋಡದೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ವೇಗದ ನಡಿಗೆ ಮ್ಯಾರಥಾನ್ ನಲ್ಲಿ ಭಾಗವಹಿಸಿರುತ್ತಾರೆ.
ಇದುವರೆಗೆ ಹಾಫ್ ಮ್ಯಾರಥಾನ್ ನಲ್ಲಿ 31 ಪದಕ, 10 ಸಾವಿರ ಮೀಟರ್ ನಲ್ಲಿ 25ಕ್ಕೂ ಹೆಚ್ಚು ಪದಕ, 45 ಕಿ.ಮೀ ಫುಲ್ ಮ್ಯಾರಥಾನ್ ನಲ್ಲಿ ಒಂದು ಪದಕ ಸೇರಿದಂತೆ ನೂರಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ.
ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ವಿಠಲ ಶೆಟ್ಟಿಗಾರ್ ಅವರು ಥೈಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ 800 ಮೀಟರ್, 1500 ಮೀಟರ್,5000 ಕಿ.ಮೀಟರ್ ಮ್ಯಾರಥಾನ್, ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
60ರ ಹರೆಯದ ವಿಠಲ ಶೆಟ್ಟಿಗಾರ್ ಕೂಲಿ ಮಾಡುತ್ತಲೇ ಕಠಿಣ ಅಭ್ಯಾಸದಿಂದ ಉತ್ತುಂಗಕ್ಕೆ ಬೆಳೆದು, ತಾನು ಬೆಳೆಯುವುದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೂ ತರಬೇತಿ ನೀಡಿರುತ್ತಾರೆ.
ಬಡತನದಲ್ಲಿಯೇ ಜೀವನ ನಡೆಸುತ್ತಿರುವ ಇವರಿಗೆ ಮೂರು ಜನ ಹೆಣ್ಣು ಮಕ್ಕಳು,ತೆಂಗಿನ ಮರವೇರಿ ಕಾಯಿ ಕೀಳುವ ಮತ್ತು ಕೂಲಿಯೇ ಜೀವನಾಧಾರ. ಬಾಲ್ಯದಿಂದಲೇ ಇವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು.
ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಬೇಕೆಂಬ ಇವರ ದೊಡ್ಡ ಕನಸು ಆಗಿತ್ತು. ಇಂತಹ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಲ್ಲಿದ್ದಾರೆ.ಮತ್ತು ಪ್ರಶಸ್ತಿ ಗಳಿಸುವ ವಿಶ್ವಾಸದಲ್ಲಿದ್ದಾರೆ.
ಇದುವರೆಗೆ ಬಹುತೇಕ ಸ್ವಂತ ಹಣದಲ್ಲಿಯೇ ಕ್ರೀಡೆಗಳಲ್ಲಿ ಭಾಗವಹಿಸಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದೇನೆ ದಾನಿಗಳ ಸಹಕಾರವು ನನಗಿದೆ ಎಂದು ಆತ್ಮವಿಶ್ವಾಸದಿಂದ ಹೇಳುವ ಶೆಟ್ಟಿಗಾರರು ವಿದೇಶಿ ನೆಲದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ದೊಡ್ಡ ಮಟ್ಟದ ಹಣಕಾಸಿನ ನೆರವು ಅಗತ್ಯವಿದೆ
ಇಲ್ಲಿವರೆಗೆ 85 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿರುತ್ತೇನೆ. ನನಗೆ ಆರ್ಥಿಕ ಸಮಸ್ಯೆ ಇರುವುದರಿಂದ ಧನ ಸಹಾಯಕ್ಕೆ ವಿನಂತಿ ಮಾಡಿಕೊಂಡಿದ್ದಾರೆ.
ವಿಳಾಸ :ವಿಠಲ ಶೆಟ್ಟಿಗಾರ್
ಗುಂಡ್ಮಿ ಗ್ರಾಮ, ಐರೋಡಿ- ಸಾಸ್ತಾನ,
G-pay 9980953700
A/C NO 01592200031035