ರಾಜಕೀಯ
ತುಳುನಾಡಿನ ದೈವಕೋಲ ಪ್ರದರ್ಶನಕ್ಕಿಟ್ಟ ವಸ್ತು ಅಲ್ಲ: ಸದನದಲ್ಲಿ ಶಾಸಕ ಸುನಿಲ್ ಕುಮಾರ್

Views: 0
ದಕ್ಷಿಣ ಕನ್ನಡ ಜಿಲ್ಲೆಯ ಜನರ ಬದುಕಿನಲ್ಲಿ ದೈವರಾದನೆ ಅನ್ನುವುದು ಹಾಸು ಹೊಕ್ಕಾಗಿದೆ. ಹೆಚ್ಚಿನ ಕುಟುಂಬಗಳು ದೈವಗಳ ಮೇಲಿನ ನಂಬಿಕೆಯ ಆಧಾರದಲ್ಲಿಯೇ ಜೀವಿಸುತ್ತಾರೆ. ಇಂತಹ ಸಂದರ್ಭದಲ್ಲಿ ದೈವರಾಧನೆಯನ್ನು ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಸೇರಿಸಿ ಪ್ರದರ್ಶನ ಕಲೆಯಾಗಿ ಅಳವಡಿಸುವ ನಿಯಮವನ್ನು ಸರಕಾರ ಕೂಡಲೇ ಕೈಬಿಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಈ ಬಗ್ಗೆ ಕಂಭೀರವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರಶ್ನಿಸಿದ ರು..
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು, ಚರ್ಚಿಸಿ ನಿರ್ಧಾರಕ್ಕೆ ಬರಲಾಗುತ್ತದೆ ಎಂದರು.