ತಿರುಪತಿ ಮೃಗಾಲಯದ ಸಿಂಹದ ಜತೆ ಫೋಟೋ ತೆಗೆದುಕೊಳ್ಳಲು ಹೋದ ವ್ಯಕ್ತಿ ಸಾವು

Views: 126
ಆಂಧ್ರ ಪ್ರದೇಶದ ತಿರುಪತಿಯಲ್ಲಿ ಮೃಗಾಲಯದ ಸಿಂಹದ ಜತೆ ಫೋಟೋ ತೆಗೆದುಕೊಳ್ಳಲು ಹೋದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ ತಿರುಪತಿ ಮೃಗಾಲಯದಲ್ಲಿ ಈ ಅವಘಡ ಸಂಭವಿಸಿದ್ದು, ಪ್ರಾಣಿಗಳನ್ನು ನೋಡಲು ಮೃಗಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬ ಸಿಂಹದ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಆವರಣಕ್ಕೆ ಜಿಗಿದಿದ್ದಾನೆ. ಈ ವೇಳೆ ಸಿಂಹವು ಆತನ ಮೇಲೆ ದಾಳಿ ಮಾಡಿದ್ದು, ಆತನನ್ನು ಕಚ್ಚಿ ಆತನ ದೇಹವನ್ನು ಛಿದ್ರಗೊಳಿಸಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ರಾಜಸ್ಥಾನದ ಅಳ್ವಾರ್ ನ 38 ವರ್ಷದ ಪ್ರಹ್ಲಾದ್ ಗುಜ್ಜರ್ ಎಂದು ಗುರುತಿಸಿದ್ದಾರೆ.
ಸಿಂಹ ಇರುವ ಪ್ರವೇಶಿಸದಂತೆ ಅಲ್ಲಿನ ಸಿಬ್ಬಂದಿ ನೀಡಿದ ಎಚ್ಚರಿಕೆಯನ್ನು ಆತ ನಿರಾಕರಿಸಿದ್ದಾನೆ ಮತ್ತು 25 ಅಡಿ ಎತ್ತರದ ಬೇಲಿಯನ್ನು ಹತ್ತಿ ಸಿಂಹ ಇರುವ ಆವರಣಕ್ಕೆ ಹಾರಿದ್ದಾನೆ ಎಂದು ತಿಳಿಸಿದ್ದಾರೆ.
ಸಿಂಹದ ಆವರಣಕ್ಕೆ ನೆಗೆದ ಕೂಡಲೇ ಅಲ್ಲಿಂದ ಡೊಂಗಲ್‌ಪುರ ಹೆಸರಿನ ಸಿಂಹವು, ಕಾವಲುಗಾರ ಬಂದು ಅದನ್ನು ನಿಯಂತ್ರಿಸುವ ಹೊತ್ತಿಗೆ ವ್ಯಕ್ತಿಯನ್ನು ಕೊಂದು ಹಾಕಿದೆ. ಪ್ರಸ್ತುತ ತಿರುಪತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.