ಜನಮನ

ತಲೆಮರೆಸಿಕೊಂಡಿದ್ದ ಮಲೆನಾಡಿನ ನಕ್ಸಲ್ ಚಳುವಳಿಯ ನಾಯಕ ಬಂಧನ

Views: 49

ಚಿಕ್ಕಮಗಳೂರು : ಅನೇಕ ವರ್ಷಗಳಿಂದ ತಲೆಮರೆಸಿಕೊಂ ಡಿದ್ದ ಮೂಡಿಗೆರೆ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಅಲಿಯಾಸ್ ಮಹದೇವ ಕೇರಳದ ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

ಕಾಡಾನೆ ದಾಳಿಗೆ ಒಳಗಾಗಿ ಗಾಯಗೊಂಡ ಸುರೇಶ್ ನನ್ನು ಚಿಕಿತ್ಸೆ ಕೊಡಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಲೆನಾಡಿನ ನಕ್ಸಲ್ ಚಳುವಳಿ ಪ್ರಮುಖರಲ್ಲಿ ಒಬ್ಬರಾಗಿದ್ದ ಅವರು ತಲೆಮರೆಸಿಕೊಂಡು ಕೇರಳದ ಓಡಾಡಿಕೊಂಡಿದ್ದರು. ಕಾಡಾನೆ ದಾಳಿಗೆ ಒಳಗಾಗಿ ಗಾಯಗೊಂಡು ಬಿದ್ದಿದ್ದ ಸುರೇಶ್ ನನ್ನು ಮೊದಲು ಚಿಕಿತ್ಸೆ ಕೊಡಿಸಿದ ಪೊಲೀಸರು ನಂತರ ವಿಳಾಸ ವಿಚಾರಣೆ ಮಾಡಿದ ವೇಳೆ ಈತ ನಕ್ಸಲ್ ಎಂದು ತಿಳಿದು ಬಂದಿದೆ. ಮೂಲತಃ ಮೂಡಿಗೆರೆ ತಾಲೂಕಿನ ಗೋಣಿಬೀಡಿನ ಅಂಗಡಿ ಗ್ರಾಮದ ಸುರೇಶ್ ಇಪ್ಪತ್ತು ವರ್ಷಗಳಿಂದ ಕಣ್ಮರೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ನಕ್ಸಲೀಯ ಕೃತ್ಯ ಪ್ರಕರಣ ಈತನ ಮೇಲಿ ದ್ದು, ಸರ್ಕಾರ ಈತನನ್ನು ಹಿಡಿದು ಕೊಟ್ಟವರಿಗೆ 5 ಲಕ್ಷ ಬಹುಮಾನ ಸಹ ಘೋಷಿಸ ಲಾಗಿತ್ತು. ಜಿಲ್ಲೆಯಲ್ಲಿ ಈತನ ಮೇಲೆ‌ ಪ್ರಕರಣಗಳಿರುವ ಹಿನ್ನಲೆ ಜಿಲ್ಲೆಗೆ ಕರೆತರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

 

Related Articles

Back to top button