ಇತರೆ

ಟೆಕ್ಕಿಗೆ ಮಕ್ಮಲ್​ ಟೋಫಿ ಹಾಕಿದ ಮೂವರು ಸಹೋದರರು!

Views: 42

ಶಿವಮೊಗ್ಗ: ಖಾಸಗಿ ಫೋಟೋಸ್ ಇದೆ ಎಂದು ಸಹೋದರರು ಗೆಳೆಯನ ಬಳಿಯೇ ಲಕ್ಷ ಲಕ್ಷ ವಸೂಲಿ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ನೇಹಿತರ ಮಾತು ನಂಬಿ ವ್ಯಕ್ತಿ ಬರೋಬ್ಬರಿ 65 ಲಕ್ಷ ಹಣ ಕಳೆದುಕೊಂಡಿದ್ದಾನೆ.

ಶಿವಮೊಗ್ಗ ಮೂಲದ ಟೆಕ್ಕಿಗೆ ಅಣ್ಣ ತಮ್ಮ ಇಬ್ಬರು ವಂಚಿಸಿದ್ದಾರೆ. ಬಿಟಿಎಂ ಲೇಔಟ್ ಮೂಲದ ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬುವರಿಂದ ಈ ಕೃತ್ಯ ನಡೆದಿದೆ. ಬ್ಲಾಕ್​ ಮೇಲ್​ಗೆ ಒಳಗಾದ ವ್ಯಕ್ತಿ ಸುಮಾರು 65 ಲಕ್ಷ ಹಣ ಕಳೆದುಕೊಂಡಿದ್ದಾನೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷಯ್ ಕುಮಾರ್ ಹಾಗೂ ಭರತ್ ಟೆಕ್ಕಿಗೆ 18 ವರ್ಷದಿಂದಲೇ ಸ್ನೇಹಿತರಾಗಿದ್ದನು.  ಸ್ನೇಹಿತ ಒಳ್ಳೆಯ ಕೆಲಸದಲ್ಲಿ ಇದ್ದಾನೆ ಎಂದು ಸಹೋದದರು ಹಣ ವಸೂಲಿ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯನ್ನ ಮುಂದಿಟ್ಟು ಸ್ನೇಹಿತನಿಗೆ ನಿನ್ನ ಖಾಸಗಿ ಫೋಟೋಸ್ ಇದೆ ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ.

ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಬೆದರಿಕೆ ಹಾಕಿ ಅರ್ಜೆಂಟಾಗಿ 12 ಲಕ್ಷ ಕೊಡಬೇಕು ಎಂದು ನಂಬಿಸಿ ಸಹೋದರರು ಮೋಸ ಮಾಡಿದ್ದಾರೆ. ಬಳಿಕ ಅಣ್ಣ ತಮ್ಮ ಹಣ ಕೊಟ್ಟು ಫೋಟೋ ಡಿಲೀಟ್ ಮಾಡಿಸಬೇಕು ಎಂದಿದ್ದಾರೆ. ಸ್ನೇಹಿತರ ಮಾತು ನಂಬಿ ಟೆಕ್ಕಿ ಹಣ ಕೊಟ್ಟಿದ್ದಾನೆ. ಹೀಗೆ ಸಹೋದದರು ಹಂತ ಹಂತವಾಗಿ ಹಣವನ್ನು ದೋಚಿದ್ದಾರೆ.

ಅತ್ತ ಟೆಕ್ಕಿ ಮನೆಯವರ ಬಳಿ ಬ್ಯಾಂಕ್ ಲೋನ್ ಮಾಡಿಸಿ ಹಣ ಕೊಟ್ಟಿದ್ದಾನೆ. ಸುಮಾರು 65 ಲಕ್ಷದಷ್ಟು ಹಣ ನೀಡಿದ್ದಾನೆ. ಆದರೆ ಕೊನೆಗೆ ಸ್ನೇಹಿತರಿಬ್ಬರ ಕಳ್ಳಾಟ ಬಯಲಾಗಿದೆ.

ನಂತರ ಟೆಕ್ಕಿ ಸ್ನೇಹಿತರ ಮಕ್ಮಲ್ ಟೋಪಿ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸ್ನೇಹಿತರ ದೋಖಾ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಅಣ್ಣ ತಮ್ಮನನ್ನ ವಶಕ್ಕೆ ಪಡೆದಿದ್ದಾರೆ. ಇಬ್ಬರೆನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button