ಟಿಕೆಟ್ ಹಂಚಿಕೆ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ ಸ್ಫೋಟ,ಜಗದೀಶ್ ಶೆಟ್ಟರ್ ವಿರುದ್ಧ ಗೋ ಬ್ಯಾಕ್ ಅಭಿಯಾನ

Views: 47
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆ ಸಮಯಕ್ಕೆ ಕೈ ಕೊಟ್ಟು ಮತ್ತೆ ಕಮಲ ಮುಡಿದಿದ್ದರು. ಧಾರವಾಡ ಕ್ಷೇತ್ರ ಬಯಸಿದ್ದ ಶೆಟ್ಟರ್ಗೆ ಬಿಜೆಪಿ ಹೈಕಮಾಂಡ್ಗೆ ಬೆಳಗಾವಿಗೆ ಟಿಕೆಟ್ ನೀಡಲು ಮುಂದಾಗಿದೆ ಮೊದಲು ಬೆಳಗಾವಿ ಬೇಡ ಅಂತ ಶೆಟ್ಟರ್ ಬಳಿಕ ಸ್ಪರ್ಧೆಗೆ ಒಪ್ಪಿದ್ದರು.
ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಜಾಲತಾಣದಲ್ಲೂ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಜೋರಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾಗೆ ಟ್ಯಾಗ್ ಮಾಡಿರೋ ನೆಟ್ಟಿಗರು ಶೆಟ್ಟರ್ ಸ್ಪರ್ಧೆಯನ್ನು ವಿರೋಧಿಸಿದ್ದಾರೆ.ಇದೀಗ ಬೆಳಗಾವಿ ಸ್ಪರ್ಧೆಗೆ ವಿರೋಧ ವ್ಯಕ್ತವಾಗ್ತಿರೋದು ಮಾಜಿ ಸಿಎಂ ಶೆಟ್ಟರ್ಗೆ ಟೆನ್ಷನ್ ತಂದಿದೆ.
ದಾವಣಗೆರೆಯಲ್ಲಿ ಈ ಬಾರಿ ಸಿದ್ದೇಶ್ವರ್ ಬದಲು ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಟಿಕೆಟ್ ನೀಡಿರೋದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಭ್ಯರ್ಥಿ ಬದಲಿಸುವಂತೆ ಮಾಜಿ ಸಚಿವ ರೇಣುಕಾಚಾರ್ಯ ಅಂಡ್ ಟೀಂ ಆಗ್ರಹಿಸಿದ್ದು, ಕಳೆದೊಂದು ವಾರದಿಂದ ಅತೃಪ್ತರ ತಂಡ ಕಟ್ಟಿಕೊಂಡು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಆದರೆ ರೇಣುಕಾಚಾರ್ಯ ಸಿಟ್ಟಾಗಿರುವ ಹೈಕಮಾಂಡ್ ನಾಯಕರು ಅವರನ್ನು ಪಕ್ಷದಿಂದ ಹೊರ ಹಾಕುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ, ರೇಣುಕಾಚಾರ್ಯಗೆ ಚಾರ್ಜ್ ಮಾಡಿದ್ದಾರೆ. ಪಕ್ಷದಲ್ಲಿ ಇದ್ದು ಕೆಲಸ ಮಾಡುವಂತಿದ್ದರೆ ಮಾಡು, ಇಲ್ಲ ಬೇರೆ ಯಾವುದಾದರೂ ಪಕ್ಷಕ್ಕೆ ಹೋಗು ಅಂತ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ವಿ.ಸೋಮಣ್ಣಗೆ ಟಿಕೆಟ್ ನೀಡಿದ್ದಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಬೇಸರಗೊಂಡಿದ್ದಾರೆ. ಮಾಧುಸ್ವಾಮಿ ಮನವೊಲಿಕೆಗೆ ಬಿಜೆಪಿ ಯತ್ನಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಗಾಳ ಹಾಕಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಧುಸ್ವಾಮಿ ಬಿ ಫಾರಂ ಚೇಂಜ್ ಮಾಡಿ ಕಾಂಗ್ರೆಸ್ನವರೂ ಕರೆದರೂ ನಿಲ್ಲಲ್ಲ. ಬಿಜೆಪಿಯವರು ಕರೆದ್ರೋ ನಿಲ್ಲಲ್ಲ. ಯಾರೋ ನೋಡಿ ಬಂದ ಹೆಣ್ಣನ್ನು ನಾನು ಮದುವೆಯಾಗಲ್ಲ. ನಾನು ಯಾರ ಬಳಿ ಕಾಂಗ್ರೆಸ್ಗೆ ಬಂದೇ ಬರ್ತೀನಿ ಅಂತ ಹೇಳಿಲ್ಲ ಎಂದಿದ್ದಾರೆ.
ಬಿಜೆಪಿಯೊಳಗಿನ ಭಿನ್ನಮತ ಚುನಾವಣೆಯ ಫಲಿತಾಂಶದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. 28ಕ್ಕೆ 28 ಸೀಟು ಗೆಲ್ಲುತ್ತೇವೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಭಿನ್ನಮತ ಕಂಟಕವಾಗುವ ಲಕ್ಷಣ ಕಾಣಿಸಿದೆ.