ರಾಜಕೀಯ

ಝೀ ನ್ಯೂಸ್-ಮ್ಯಾಟ್ರಿಜ್‌ ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಭರ್ಜರಿ ಗೆಲುವು ಯಾರಿಗೆ..?

Views: 134

ನವದೆಹಲಿ: ಲೋಕಸಭೆ ಚುನಾವಣೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 377 ಸೀಟು ಗೆಲ್ಲಲಿದೆ. ಇಂಡಿಯಾ ಕೂಟಕ್ಕೆ ಕೇವಲ 93 ಸೀಟು ಬರಲಿವೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್‌ ಚುನಾವಣಾಪೂರ್ವ ಸಮೀಕ್ಷೆ ಹೇಳಿದೆ

ಕಳೆದ ಚುನಾವಣೆಯಲ್ಲಿ ಎನ್‌ಡಿಎ 351 ಹಾಗೂ ಯುಪಿಎ 90 ಸ್ಥಾನ ಗಳಿಸಿದ್ದವು.ಇದೇ ವೇಳೆ, ಕರ್ನಾಟಕದಲ್ಲಿ ಎನ್‌ಡಿಎ 23 ಹಾಗೂ ಕಾಂಗ್ರೆಸ್‌ 5 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ, ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್‌ 1 ಹಾಗೂ ಪಕ್ಷೇತರರು 1 ಸ್ಥಾನ ಗಳಿಸಿದ್ದರು.

ಟೈಮ್ಸ್ ನೌ-ಇಟಿಜಿ ಸಮೀಕ್ಷೆ:

ಇನ್ನು ಟೈಮ್ಸ್ ನೌ-ಇಟಿಜಿ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 2019ಕ್ಕೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ 2024ರಲ್ಲಿ ಮತ ಹಾಗೂ ಗೆಲ್ಲುವು ಸ್ಥಾನಗಳು ಹೆಚ್ಚಾದರೂ ಕೂಡ ಬಿಜೆಪಿ ಭರ್ಜರಿಯಾಗಿ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಕರ್ನಾಟಕದ 28 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ (ಬಿಜೆಪಿ ಹಾಗೂ ಜೆಡಿಎಸ್‌) 22-24 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಇನ್ನು ಐಎನ್‌ಡಿಐಎ (ಕಾಂಗ್ರೆಸ್‌) 4-6 ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿದೆ.

ಇಂಡಿಯಾ ಟಿವಿ – ಸಿಎನ್‌ಎಕ್ಸ್‌ ಸಮೀಕ್ಷೆ

ಇಂಡಿಯಾ ಟಿವಿ – ಸಿಎನ್‌ಎಕ್ಸ್‌ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಲ್ಲಿ 24 ಕ್ಷೇತ್ರಗಳಲ್ಲಿ ಸೀಟು ಗೆಲ್ಲಲಿದೆ. ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್‌ಡಿಎ ಮೈತ್ರಿಯಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ 2 ಕ್ಷೇತ್ರ ಗೆಲ್ಲಲಿದೆಯಂತೆ.

2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 1 ಸ್ಥಾನ (ಬೆಂಗಳೂರು ಗ್ರಾಮಾಂತರ) ಮಾತ್ರ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ನ ಸ್ಥಾನ ಏರಿಕೆಯಾಗಲಿದೆ.

Related Articles

Back to top button