ಇತರೆ
ಜೋಡಿ ಕೊಲೆಗೆ ಸುಫಾರಿ ನೀಡಿದ್ದ ಮಾಲೀಕನ ಬಂದನ

Views: 0
ಏರೋನಿಕ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪಣೀಂದ್ರ ಹಾಗೂ ಸಿಇಒ ವಿನು ಕುಮಾರ್ ಕೊಲೆ ಪ್ರಕರಣದಲ್ಲಿ ಜಿ ನೆಟ್ ಕಂಪನಿ ಮಾಲೀಕ ಅರುಣ್ ಕುಮಾರ್ ನನ್ನು ಅಮೃತಹಳ್ಳಿ ಪೊಲೀಸ್ ಠಾಣೆಯವರು ಬಂಧಿಸಿದ್ದಾರೆ.
ಜುಲೈ 11 ರಂದು ನಡೆದಿದ್ದ ಕೊಲೆ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿದ್ದು, ಪೊಲೀಸರು ಅರುಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವ್ಯವಹಾರದ ವೈಷಮ್ಯದಿಂದಾಗಿ ಕೊಲೆ ಮಾಡಲು ಅರುಣ್ ಗೆ ಸುಪಾರಿ ನೀಡಿದ್ದ ಸಂಗತಿ ತನಿಖೆಯಿಂದ ತಿಳಿದು ಬಂದಿದೆ.
ಅಪರಾಧ ಸಂಚು ಹಾಗೂ ಕೊಲೆ ಆರೋಪದಡಿ ಅರುಣನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಎಲ್ಲರನ್ನು ಕಷ್ಟಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.