ಇತರೆ

ಜೈಲಿನಿಂದ ಬಂದ ರೌಡಿಶೀಟರ್ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ

Views: 90

ಕೋಲಾರ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಗಡಿ ತಮಿಳುನಾಡಿನ ಬೇರಿಕೈ ಬಳಿ ನಡೆದಿದೆ. ಬೆರಿಕೈ ಮೂಲದ ಕಾರ್ತಿಕ್ (32 ) ಕೊಲೆಯಾದ ಯುವಕ. ಮಾಲೂರು ಪೊಲೀಸ್ ಠಾಣೆಯ ರೌಡಿಶೀಟರ್ ಪ್ರತಾಪ್ ಎಂಬಾತ ಈ ಕೃತ್ಯ ವೆಸಗಿದ್ದಾನೆ.

ರೌಡಿ ಶೀಟರ್ ಪ್ರತಾಪ್ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಅನಕರಳ್ಳಿ ಗ್ರಾಮದವನು. ಈ ಹಿಂದೆ ಮಾಲೂರು ಕೋಲಾರ ರಸ್ತೆಯಲ್ಲಿ ಅರಿಳೇರಿ ಗಿರೀಶ್ ಕೊಲೆ ಮಾಡಿ ಜೈಲು ಸೇರಿದ್ದನು. ಇತ್ತೀಚೆಗೆ ಬಿಡುಗಡೆಯಾಗಿ ಬಂದ ಪ್ರತಾಪ್ ಇದೀಗ ಮತ್ತೊಂದು ಕೊಲೆ ಮಾಡಿದ್ದಾನೆ.

ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button