ಇತರೆ

ಜೈಲಿನಲ್ಲಿದ್ದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್! ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರೇ ಶಾಕ್!!

Views: 99

ಕನ್ನಡ ಕರಾವಳಿ ಸುದ್ದಿ: ಕಾರಾಗೃಹದಲ್ಲಿದ್ದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಕಾರಾಗೃಹದಲ್ಲಿ ನಡೆದಿದೆ.

ಖೈದಿ ದೌಲತ್ (30) ಎಂಬಾತನ ಹೊಟ್ಟೆಯೊಳಗೆ ಮೊಬೈಲ್ ಪತ್ತೆಯಾಗಿದೆ. ತಾನು ಕಲ್ಲನ್ನು ನುಂಗಿದ್ದೇನೆ ಎಂದು ಖೈದಿ ದೌಲತ್ ಕಾರಾಗೃಹದ ಆಸ್ಪತ್ರೆಗೆ ಬಂದು ತೋರಿಸಿದ್ದ. ಈ ವೇಳೆ ಪರಿಶೀಲಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿದಾಗ ಖೈದಿ ದೌಲತ್‌ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಗೊತ್ತಾಗಿದೆ. ಒಂದು ಇಂಚು ಅಗಲ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ.ಶಸ್ತ್ರಚಿಕಿತ್ಸೆ ನಡೆಸಿದಾಗ ಅದು ಮೊಬೈಲ್‌ ಫೋನ್‌ ಎಂಬುದು ತಿಳಿದು ವೈದ್ಯರೇ ಕ್ಷಣ ಕಾಲ ದಂಗಾಗಿದ್ದಾರೆ.

ಮೊಬೈಲ್ ಬಳಕೆಗೆ ಜೈಲಿನಲ್ಲಿ ನಿರ್ಬಂಧವಿದ್ದರೂ ಹೇಗೆ ಮೊಬೈಲ್ ಜೈಲಿಗೆ ತಲುಪಿತು ಎಂಬುದರ ಕುರಿತು ತನಿಖೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ಕೈದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಜೈಲು ಸಿಬ್ಬಂದಿ ತೊಡಗಿಸಿಕೊಡಿರುವ ಆರೋಪವೂ ಕೇಳಿಬಂದಿದೆ. ಭದ್ರತಾ ಲೋಪದ ಕುರಿತಾಗಿಯೂ ತನಿಖೆಗೆ ಮುಂದಾಗಿದ್ದಾರೆ.

 

Related Articles

Back to top button