ಜೀವನಪೂರ್ತಿ ಜೊತೆಯಾಗಿ ಇರುತ್ತೇನೆ ಎಂದವಳು15 ದಿನಕ್ಕೆ ಗಂಡನನ್ನು ಬಿಟ್ಟು ಎಸ್ಕೆಪ್!

Views: 123
ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಕೊಪ್ಪ ಮೌನೇಶ್ ಎಂಬಾ ಯುವಕ 32 ವರ್ಷದ ವಿಧವೆ ದೀಪಿಕಾಳನ್ನು ಮದುವೆಯಾಗಿ ಬಾಳು ಕೊಟ್ಟಿದ್ದು ಬಹಳ ಸುಂದರ ಭವಿಷ್ಯದ ಕನಸು ಕಂಡಿದ್ದ. ಆದರೆ ನಂತರ ನಡೆದಿದ್ದೇ ಬೇರೆ. ವಿಧವೆ ಎಂದು ಬಾಳು ಕೊಟ್ಟ ಯುವಕನ ಜೀವನದಲ್ಲಿ ಬರಸಿಡಿಲಿನಂತಹ ಸುದ್ದಿ ಬಡಿದಿದೆ. ‘ಜೀವನಪೂರ್ತಿ ಜೊತೆಯಾಗಿ ಇರುತ್ತೇನೆ’ ಎಂದು ಮಾತುಕೊಟ್ಟು ಸಪ್ತಪದಿ ತುಳಿದವಳು 15 ದಿನಕ್ಕೆ ಗಂಡನನ್ನು ಬಿಟ್ಟು ಎಸ್ಕೆಪ್ ಆಗಿದ್ದಾಳೆ.
ತಂದೆ ತಾಯಿ ಇಲ್ಲದ ಅನಾಥ ಮೌನೇಶ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪದಲ್ಲಿ ಕೆಲಸ ಮಾಡಿಕೊಂಡಿದ್ದ. ಈಗಾಗಲೇ ಮದುವೆಯಾಗಿ ಒಂದು ಮಗು ಇರುವ ದೀಪಿಕಾ 10 ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡಿದದ್ದಳು. ಹಾಗಾಗಿ ವಿಧವೆಗೆ ಬಾಳು ನೀಡುವ ಸದುದ್ದೇಶದಿಂದ ದೀಪಿಕಾಳನ್ನು ಫೆ.7 ರಂದು ನವುಲೆಯ ಚೌಡೇಶ್ವರಿ ದೇವಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದರು. ನಂತರ ಇವರಿಬ್ಬರು ಧರ್ಮಸ್ಥಳ ಸೇರಿ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು. ಆದರೆ ಮದುವೆಯಾ ಎರಡನೇ ದಿನಕ್ಕೆ ತವರು ಮನೆ ಸೇರಿದ ಈಕೆ 15 ನೇ ದಿನಕ್ಕೆ ಗಂಡನಿಗೆ ಕೈ ಕೊಟ್ಟು ಎಸ್ಕೆಪ್ ಆಗಿದ್ದಾಳೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಮವನೇಶ್ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






