ಜನಮನ

ಜಗತ್ತಿನಲ್ಲೇ ಅತ್ಯಂತ ದುಬಾರಿ ಮೊತ್ತ 40 ಕೋಟಿ ರೂಪಾಯಿಗೆ ಮಾರಾಟವಾದ ಹಸು: ಏನಿದರ ಸ್ಪೆಷಲ್‌..?

Views: 164

ಜಗತ್ತಿನಲ್ಲಿ 40 ಕೋಟಿ ರೂಪಾಯಿಗೆ ಮಾರಾಟವಾದ ಅತ್ಯಂತ ದುಬಾರಿ ಹಸು ಅನ್ನೋ ಖ್ಯಾತಿಗೆ ಇದು ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ನಡೆದ ಜಾನುವಾರು ಹರಾಜಿನಲ್ಲಿ ಬ್ರೆಜಿಲ್‌ನ ಈ ಹಸು ಹೊಸ ದಾಖಲೆ ಬರೆದಿದೆ.

40 ಕೋಟಿಗೆ ಹರಾಜಾಗಿರುವ ಈ ಹಸು ಭಾರತದ ನೆಲ್ಲೂರು ಮೂಲದ ತಳಿಗೆ ಸೇರಿದ್ದು. ನೆಲ್ಲೂರು ತಳಿಯ ಹಸುಗಳಿಗೆ ಬ್ರೆಜಿಲ್‌ನಲ್ಲಿ ಸಾಕಷ್ಟು ಬೇಡಿಕೆ ಇದೆ. ವಯಾಟಿನಾ-19 ಹಸುವನ್ನು ಬ್ರೆಜಿಲ್‌ನಲ್ಲಿ 4.8 ಮಿಲಿಯನ್ USD ಡಾಲರ್‌ಗೆ ಕೊಂಡು ಕೊಳ್ಳಲಾಗಿದೆ. ಲೈವ್‌ಸ್ಟಾಕ್‌ ಹರಾಜಿನಲ್ಲಿ ಈ ಪ್ರಕ್ರಿಯೆ ನೀಡಿದ್ದು, ಇಷ್ಟು ದೊಡ್ಡ ಮೊತ್ತದಲ್ಲಿ ಮಾರಾಟವಾಗಿರೋದು ಇದೇ ಮೊದಲು.

ನೆಲ್ಲೂರು ಹಸುವಿನ ಮೊದಲ ಜೋಡಿ 1868ರಲ್ಲಿ ಬ್ರೆಜಿಲ್‌ಗೆ ಹಡಗಿನ ಮೂಲಕ ಕಳುಹಿಸಲಾಯಿತು. ಇದರ ನಂತರ 1878ರಲ್ಲಿ ಹ್ಯಾಂಬರ್ಗ್ ಮೃಗಾಲಯದಿಂದ ಇನ್ನೂ ಎರಡು ಹಸುಗಳನ್ನು ತರಲಾಯಿತು. 1960ರ ಅವಧಿಯಲ್ಲಿ ನೂರು ನೆಲ್ಲೂರು ಹಸುಗಳನ್ನು ಪರಿಚಯಿಸಲಾಯಿತು. ಬ್ರೆಜಿಲ್‌ನಲ್ಲಿರುವ ಶೇಕಡ 80 ರಷ್ಟು ಹಸುಗಳು ನೆಲ್ಲೂರು ಹಸುಗಳಾಗಿವೆ.

ನೆಲ್ಲೂರು ಹಸು ಬಿಳಿ ತುಪ್ಪಳ ಮತ್ತು ಭುಜದ ಮೇಲೆ ವಿಶಿಷ್ಟವಾದ ಬಲ್ಬಸ್ ಗೂನುಗಳನ್ನು ಹೊಂದಿರುತ್ತವೆ. ಈ ಜಾನುವಾರುಗಳಿಗೆ ಆಂಧ್ರಪ್ರದೇಶದ ನೆಲ್ಲೂರು ನಗರದ ಹೆಸರನ್ನು ಇಡಲಾಗಿದೆ. ನೆಲ್ಲೂರು ತಳಿಯ ಹಸುಗಳು ನೋಡಲು ಕಟ್ಟು ಮಸ್ತಾದ ದೇಹವನ್ನು ಹೊಂದಿರುತ್ತವೆ. ಉನ್ನತ ಅನುವಂಶಿಕ ಗುಣಗಳನ್ನು ಹೊಂದಿರುವುದಕ್ಕೆ ಇದು ಹೆಸರುವಾಸಿಯಾಗಿದೆ.

ಈ ತಳಿಯ ವಿಶೇಷತೆ ಏನು?

ಈ ತಳಿಯ ದೊಡ್ಡ ವಿಶೇಷತೆ ಎಂದರೆ ಬಿಸಿ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಇದಕ್ಕೆ ಯಾವುದೇ ಪರಾವಲಂಬಿ ಸೋಂಕು ಇಲ್ಲ. ಈ ಕಾರಣಗಳಿಂದ ಜನರು ಸುಲಭವಾಗಿ ಈ ಹಸುವನ್ನು ಸಾಕಬಹುದು. Viatina-19 FIV ಮಾರಾ ಇಮೊವಿಸ್ ಈ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. Viatina-19 FIV Mara Imovis ಮಾರಾಟವು ಹಸುವಿನ ಬಗ್ಗೆ ಮಾತ್ರವಲ್ಲ, ಅದರ ಸಾಮರ್ಥ್ಯದ ಬಗ್ಗೆಯೂ ಇದೆ. ಈ ಹಸುವಿನ ಆನುವಂಶಿಕ ವಸ್ತು – ಭ್ರೂಣ ಮತ್ತು ವೀರ್ಯದ ರೂಪದಲ್ಲಿ, ಸಂತತಿಯನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಆಂಧ್ರಪ್ರದೇಶದ ನೆಲ್ಲೂರು ಮೂಲದ ಈ ತಳಿಯು ಉತ್ತಮ ಗುಣಮಟ್ಟದ್ದಾಗಿದೆ. ಭಾರತದಲ್ಲಿ ಹುಟ್ಟಿದ ನೆಲ್ಲೂರು ತಳಿ ಇದೀಗ ಬ್ರೆಜಿಲ್‌ನ ಪಶುಸಂಗೋಪನೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಬಾಸ್ ಇಂಡಿಕಸ್ ಎಂದು ಕರೆಯಲಾಗುತ್ತದೆ. ಬ್ರೆಜಿಲ್‌ನಲ್ಲಿ ಪ್ರಖ್ಯಾತವಾಗಿರುವ ಈ ಹಸುವಿಗೆ ಅಂತರಾಷ್ಟ್ರೀಯ ಹಸುವಿನ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿದೆ.

Related Articles

Back to top button