ಇತರೆ
ಚಿಕ್ಕಬಳ್ಳಾಪುರ: ಸ್ನೇಹಿತರ ಜತೆ ಜಲಾಶಯಕ್ಕೆ ಬಂದ ಹುಡುಗ ಎಲ್ಲರ ಕಣ್ಣೆದುರೇ ನೀರುಪಾಲು

Views: 23
ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಬೆಂಗಳೂರು ಮೂಲದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಸ್ನೇಹಿತರ ಜತೆ ಬಂದಿದ್ದ ಯುವಕ ಮೋಜು ಮಸ್ತಿ ಮಾಡುತ್ತಾ ನೀರಿಗಿಳಿದಾಗ ಮುಳುಗಿ ಮೃತಪಟ್ಟಿದ್ದಾನೆ.
ಬೆಂಗಳೂರಿನ ಬಾಬೂಸಾಪಾಳ್ಯ ನಿವಾಸಿಯಾಗಿರುವ 23 ವರ್ಷದ ಅಭಿ ಮೃತ ಯುವಕ. ಆತ ತನ್ನ ಗೆಳೆಯರ ಜತೆ ಚಿಕ್ಕ ಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಲು ಬಂದಿದ್ದ. ಜಲಾಶಯದ ನೀರಿನಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶವ ಶೋಧಕಾರ್ಯ ನಡೆಯುತ್ತಿದೆ.
ತಂದೆತಾಯಿಗೆ ಒಬ್ಬನೆ ಮಗನಾಗಿದ್ದ ಅಭಿ ನೀರುಪಾಲಾಗಿರುವುದರಿಂದ ಕುಟುಂಬ ಕಣ್ಣೀರಿಡುತ್ತಿದೆ. ಮನೆಯವರು ಕೂಡಾ ಆಗಮಿಸಿದ್ದು ಶವದ ಹುಡುಕಾಟ ಮುಂದುವರಿದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.